ರಣವೀರ್ ಸಿಂಗ್, ದೀಪಿಕಾ ಪಡುಕೋಣೆ
ಬಾಲಿವುಡ್
ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರಬೇಡ: ಪತಿಗೆ ಆರ್ಡರ್ ಮಾಡಿದ ದೀಪಿಕಾ
ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರದಂತೆ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಸಿಂಗ್ ಅವರಿಗೆ ವಿಶೇಷ ಬೇಡಿಕೆ ಇಟ್ಟಿರುವ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಮುಂಬೈ: ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರದಂತೆ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಸಿಂಗ್ ಅವರಿಗೆ ವಿಶೇಷ ಬೇಡಿಕೆ ಇಟ್ಟಿರುವ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
83 ಚಿತ್ರದ ಪೋಸ್ಟರ್ ಬಿಡುಗಡೆಗಾಗಿ ಚೆನ್ನೈಗೆ ತೆರಳಿದ್ದ ಪತಿ ರಣವೀರ್ ಸಿಂಗ್ ಅವರಿಗೆ, ಶ್ರೀ ಕೃಷ್ಣದಿಂದ 1 ಕೆಜಿ ಮೈಸೂರು ಪಾಕ್, 21/2 ಕೆಜಿ ಪೊಟ್ಯಾಟೊ ಚಿಪ್ಸ್ ತರದೇ ವಾಪಾಸ್ ಬರಬೇಡಿ ಎಂದು ದೀಪಿಕಾ ಪಡುಕೋಣೆ ಮಾಡಿರುವ ಬೇಡಿಕೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ದೀಪಿಕಾ ಪಡುಕೋಣೆ ನಂತರ 83 ಚಿತ್ರದ ನಿರ್ದೇಶಕ ಕಬೀರ್ ಖಾನ್ ಅವರ ಪತ್ನಿ ಮಿಮಿ ಮಥೂರ್ ಕೂಡಾ ಇದೇ ರೀತಿಯ ಆರ್ಡರ್ ಮಾಡಿದ್ದಾರೆ.
83 ಸಿನಿಮಾ, 1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾ ಆಧಾರಿತ ಚಿತ್ರವಾಗಿದ್ದು, 1983ರಲ್ಲಿ ವಿಶ್ವಕಪ್ ಗೆದ್ದ ನಿಜವಾದ ಟೀಂ ಇಂಡಿಯಾದ ಪೋಟೋವೊಂದನ್ನು ರಣವೀರ್ ಸಿಂಗ್ ಶೇರ್ ಮಾಡಿದ್ದಾರೆ.

