ಅಭಿಮಾನಿಯ ಸೆಲ್ಫಿ ಹುಚ್ಚಿಗೆ ಕೋಪಗೊಂಡ ಸಲ್ಮಾನ್: ಮುಂದೇನಾಯ್ತು?ವಿಡಿಯೋ

ಗೋವಾ ವಿಮಾನ ನಿಲ್ದಾಣದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಅಭಿಮಾನಿಯ ವರ್ತನೆಯಿಂದ ಕ್ರೋದಗೊಂಡ ಬಾಲಿವುಡ್ ನಟ ಸಲ್ಮಾನ್ ಖಾನ್, ಆತನಿಂದ ಮೊಬೈಲ್ ನ್ನು ಕಿತ್ತುಕೊಂಡಿರುವ ಘಟನೆ ಇಂದು ನಡೆದಿದೆ.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on: 

ಪಣಜಿ:  ಗೋವಾ ವಿಮಾನ ನಿಲ್ದಾಣದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಅಭಿಮಾನಿಯ ವರ್ತನೆಯಿಂದ ಕ್ರೋದಗೊಂಡ ಬಾಲಿವುಡ್ ನಟ ಸಲ್ಮಾನ್ ಖಾನ್, ಆತನಿಂದ ಮೊಬೈಲ್ ನ್ನು ಕಿತ್ತುಕೊಂಡಿರುವ ಘಟನೆ ಇಂದು ನಡೆದಿದೆ.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ವಿಮಾನ ನಿಲ್ದಾಣದಿಂದ ಹೊರಗೆ ಬರಬೇಕಾದರೆ ಅಭಿಮಾನಿಯೊಬ್ಬ ಸಲ್ಮಾನ್ ಖಾನ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಸಲ್ಮಾನ್ ಖಾನ್, ಆತನ ಮೊಬೈಲ್ ಕಸಿದುಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ. ಅಭಿಮಾನಿ ಏರ್ ಲೈನ್ಸ್  ನೌಕರ ಎಂಬುದು ತದನಂತರ ತಿಳಿದುಬಂದಿದೆ. 

ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೆ, ವೈರಲ್ ಆಗಿರುವ ವಿಡಿಯೋ ಬಗ್ಗೆ ವಿಚಾರಣೆ ನಡೆಸಿ ಖಚಿತಪಡಿಸಿಕೊಳ್ಳಲಾಗವುದು ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ವಿಮಾನ ನಿಲ್ದಾಣ ಪೊಲೀಸ್ ಇನ್ಸ್ ಪೆಕ್ಟರ್ ಸಾಗರ್ ಎಕೊಸ್ಕರ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com