ಸೋನು ಸೂದ್ ಗೆ 47 ನೇ ವಸಂತದ ಸಂಭ್ರಮ: ಅಭಿಮಾನಿಗಳಿಂದ ಸೃಜನಾತ್ಮಕ ಶುಭ ಹಾರೈಕೆ! 

ಕೊರೋನಾ ಸಂದರ್ಭದಲ್ಲಿ ವಲಸಿಗ ಕಾರ್ಮಿಕರು, ಬಡವರಿಗೆ ಸಹಾಯ ಹಸ್ತ ಚಾಚಿದ್ದ ಬಾಲಿವುಡ್ ನಟ ಸೋನು ಸೂದ್ 47 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 
ಸೋನು ಸೂದ್ ಗೆ 47 ನೇ ವಸಂತದ ಸಂಭ್ರಮ: ಅಭಿಮಾನಿಗಳಿಂದ ಸೃಜನಾತ್ಮಕ ಶುಭ ಹಾರೈಕೆ!
ಸೋನು ಸೂದ್ ಗೆ 47 ನೇ ವಸಂತದ ಸಂಭ್ರಮ: ಅಭಿಮಾನಿಗಳಿಂದ ಸೃಜನಾತ್ಮಕ ಶುಭ ಹಾರೈಕೆ!
Updated on: 

ಕೊರೋನಾ ಸಂದರ್ಭದಲ್ಲಿ ವಲಸಿಗ ಕಾರ್ಮಿಕರು, ಬಡವರಿಗೆ ಸಹಾಯ ಹಸ್ತ ಚಾಚಿದ್ದ ಬಾಲಿವುಡ್ ನಟ ಸೋನು ಸೂದ್ 47 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

ನೆಚ್ಚಿನ ನಟದ ಜನ್ಮದಿನವನ್ನು ವಿನೂತನವಾಗಿ ಆಚರಿಸಿರುವ ಅಭಿಮಾನಿಗಳು ಟ್ವಿಟರ್ ನಲ್ಲಿ ಸೋನು ಸೂದ್ ಹೆಸರನ್ನು ಟ್ರೆಂಡ್ ಮಾಡಿದ್ದಾರೆ.

ಕೊರೋನಾ ಸಂದರ್ಭದಲ್ಲಿ ದುರ್ಬಲರಿಗೆ ಅಗತ್ಯವಿರುವವರಿಗೆ ಆರ್ಥಿಕ ನೆರವು, ವಲಸೆ ಕಾರ್ಮಿಕರಿಗೆ ಊರುಗಳಿಗೆ ತೆರಳಲು ವ್ಯವಸ್ಥೆ ಮಾಡಿದ್ದ ಸೋನು ಸೂದ್ ರಿಯಲ್ ಹಿರೋ ಎನಿಸಿಕೊಂಡಿದ್ದರು.

'messiah' of migrant labourers ಎಂದೇ ಕರೆಸಿಕೊಳ್ಳುವ ಸೋನು ಸೂದ್, ಕಾಲ್ನಡಿಗೆಯಲ್ಲೆ ಸಂಚರಿಸುತ್ತಿದ್ದ ಹಲವಾರು ವಲಸಿಗ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪುವಂತೆ ಮಾಡಿ ಜನಮನ ಗೆದ್ದಿದ್ದರು.

ಸೋನು ಸೂದ್ ಅವರ ಮಾನವಿಯ ನಡೆಯನ್ನು ನೆನೆದು ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com