ಅಶ್ಲೀಲ ವಿಡಿಯೋ ಚಿತ್ರೀಕರಣ: ಮಾದಕ ನಟಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್

ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಗೋವಾದಲ್ಲಿ ದೂರು ದಾಖಲಾಗಿದೆ. ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದಕ್ಕಾಗಿ ಗೋವಾ ಫರ್ವರ್ಡ್ ಪಾರ್ಟಿಯ ಮಹಿಳಾ ಘಟಕ ಪೂನಂ ಪಾಡೆ ವಿರುದ್ಧ ದೂರು ದಾಖಲಿಸಿದೆ.
ಪೂನಂ ಪಾಂಡೆ
ಪೂನಂ ಪಾಂಡೆ
Updated on: 

ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಗೋವಾದಲ್ಲಿ ದೂರು ದಾಖಲಾಗಿದೆ. ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದಕ್ಕಾಗಿ ಗೋವಾ ಫರ್ವರ್ಡ್ ಪಾರ್ಟಿಯ ಮಹಿಳಾ ಘಟಕ ಪೂನಂ ಪಾಡೆ ವಿರುದ್ಧ ದೂರು ದಾಖಲಿಸಿದೆ.

ಗೋವಾದ ಚಾಪೋಲಿ ಡ್ಯಾಮ್ ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದರೆಂದು ದೂರು ದಾಖಲಾಗಿರುವುದಲ್ಲದೆ ಅದೇ ಪ್ರಕರಣಕ್ಕೆ ಸಂಬಂಧಿಸಿ ಕ್ಯಾನಕೋನಾ ಪೋಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಸಹ ಎಫ್ಐಆರ್ ದಾಖಲಾಗಿದೆ.

ಇತ್ತೀಚಿಗಷ್ಟೇ ನಟಿ ತನ್ನ ಪತಿ ಸ್ಯಾಮ್ ಅಹ್ಮದ್ ವಿರುದ್ಧ ಕಿರುಕುಳ, ಬೆದರಿಕೆ ಹಾಗೂ ಹಲ್ಲೆ ಆರೋಪ ಹೊರಿಸಿ ಗೋವಾದಲ್ಲಿ ದೂರು ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 504, 354 ಮತ್ತು 506 (ii) ರ ಅಡಿಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ, ಆರೋಪಿ ಸ್ಯಾಮ್ ಅಹ್ಮದ್ ಬಾಂಬೆ, ತನ್ನ ಸಂಗಾತಿಯು ತನ್ನ ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿದ್ದಾನೆ ಎಂದು ನಟಿ ಆರೋಪಿಸಿದ್ದರು. ಈ ಸಂಬಂಧ ಚಿತ್ರ ನಿರ್ಮಾಪಕನನ್ನು ಬಂಧಿಸಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಈ ವರ್ಷ ಸೆಪ್ಟೆಂಬರ್ 10 ರಂದು ಪೂನಮ್ ಮತ್ತು ಸ್ಯಾಮ್ ವಿವಾಹವಾದರು. ಪೂನಂ ಅವರು ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದು ನಶಾ, ದಿ ಜರ್ನಿ ಆಫ್ ಕರ್ಮ ಮತ್ತು ಮಾಲಿನಿ ಅಂಡ್ ಕೋ .. ಚಿತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com