ನಟಿಯ ಮತ್ತೊಂದು ವಿವಾದ: ಮುಂಬೈಯನ್ನು ತಾಲಿಬಾನ್ ಗೆ ಹೋಲಿಸಿದ ಕಂಗನಾ

ಬಾಲಿವುಡ್ ನಟಿ ಕಂಗನಾ ಶುಕ್ರವಾರ ಮತ್ತೊಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಮುಂಬಯಿಯನ್ನು ರಕ್ತ ವ್ಯಸನಿ ತಾಲಿಬಾನ್ ಗೆ ಹೋಲಿಸಿದ್ದಾರೆ.
ಕಂಗನಾ ರಣಾವತ್
ಕಂಗನಾ ರಣಾವತ್

ಮುಂಬಯಿ: ಬಾಲಿವುಡ್ ನಟಿ ಕಂಗನಾ ಶುಕ್ರವಾರ ಮತ್ತೊಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಮುಂಬಯಿಯನ್ನು ರಕ್ತ ವ್ಯಸನಿ ತಾಲಿಬಾನ್ ಗೆ ಹೋಲಿಸಿದ್ದಾರೆ.

ಮುಂಬೈಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ಅವರು, ಒಂದೇ ದಿನಕ್ಕೆ ಪಿಒಕೆಯಿಂದ ತಾಲಿಬಾನ್‌ಗೆ ಅದನ್ನು ಕೊಂಡೊಯ್ದಿದ್ದಾರೆ ಎಂದು ಮತ್ತೆ ಲೇವಡಿ ಮಾಡಿದ್ದಾರೆ.

ಮುಂಬೈ ಪೊಲೀಸರು ಕೊರೊನಾ ವೈರಸ್ ಸೋಂಕಿನಿಂದ ಹೇಗೆ ಜೀವ ಕಳೆದುಕೊಂಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಪೊಲೀಸರ ಬಗ್ಗೆ ನಟಿ ಅಂತಹ ಹೇಳಿಕೆ ನೀಡುವುದು ಸರಿಯಲ್ಲ. ಅದನ್ನು ಖಂಡಿಸುತ್ತೇವೆ. ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಮುಂಬೈ ಅಥವಾ ಮಹಾರಾಷ್ಟ್ರದಲ್ಲಿ ವಾಸಿಸಲು ಸುರಕ್ಷಿತವಲ್ಲ ಎಂದೆನಿಸಿದರೆ
ಅವರಿಗೆ ಇಲ್ಲಿ ವಾಸಿಸಲು ಹಕ್ಕಿಲ್ಲ ಎಂದು ಅನಿಲ್ ದೇಶ್‌ಮುಖ್ ಹೇಳಿದ್ದರು.

ಮುಂಬಯಿಯಿಂದಾಗಿ ಕಂಗನಾ ರಣಾವತ್ ಹಣ, ಹೆಸರು ಗಳಿಸಿದ್ದಾರೆ, ಆದರೆ ಈಗ ಮುಂಬೈ ಅನ್ನು ನಿಂದಿಸುತ್ತಿದ್ದಾರೆ , ಮುಂಬೈಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವ ಮೂಲಕ 13 ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ತೋರಟ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com