'ಕೌನ್ ಬನೇಗಾ ಕರೋಡ್ ಪತಿ' 12ನೇ ಸೀಸನ್ ನಲ್ಲಿ ಸಾಕಷ್ಟು ಬದಲಾವಣೆ.. ಆಡಿಯನ್ಸ್ ಪೋಲ್ ಮಾಯ!!

ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಿರೂಪಕರಾಗಿ ನಡೆಸಿಕೊಡುವ ರಿಯಾಲಿಟಿ ಗೇಮ್ ಶೋ 'ಕೌನ್ ಬನೇಗಾ ಕರೋಡ್‌ ಪತಿ' ಅತ್ಯಂತ ಜನಪ್ರಿಯ ಕಿರುತೆರೆಯ ಈ ಗೇಮ್ ಶೋ, ಅದೆಷ್ಟೋ ಮಂದಿಯನ್ನು ಲಕ್ಷಾಧೀಶರನ್ನಾಗಿ, ಕೆಲವರನ್ನು ಕೋಟ್ಯಾಧಿಪತಿಗಳನ್ನಾಗಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮುಂಬೈ: ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಿರೂಪಕರಾಗಿ ನಡೆಸಿಕೊಡುವ ರಿಯಾಲಿಟಿ ಗೇಮ್ ಶೋ 'ಕೌನ್ ಬನೇಗಾ ಕರೋಡ್‌ ಪತಿ' ಅತ್ಯಂತ ಜನಪ್ರಿಯ ಕಿರುತೆರೆಯ ಈ ಗೇಮ್ ಶೋ, ಅದೆಷ್ಟೋ ಮಂದಿಯನ್ನು ಲಕ್ಷಾಧೀಶರನ್ನಾಗಿ, ಕೆಲವರನ್ನು ಕೋಟ್ಯಾಧಿಪತಿಗಳನ್ನಾಗಿಸಿದೆ.

ಶೀಘ್ರದಲ್ಲಿಯೇ ಆರಂಭಗೊಳ್ಳಲಿರುವ ಕೆಬಿಸಿ 12 ನೇ ಸೀಜನ್ ನಲ್ಲಿ ಕೊರೊನಾ ಕಾರಣದಿಂದ ಸಾಕಷ್ಟು ಬದಲಾವಣೆ ಮಾಡಲಾಗಿದೆ ಎಂದು ಕಾರ್ಯಕ್ರಮ ನಿರ್ವಾಹಕಿ ಸುಜಾತ ಸಂಗಮಿತ್ರ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವರಿಗಾಗಿ ನಾವು ಈ ವರ್ಷ ಬೇರೆ ಬೇರೆ ಸ್ಥಳಗಳಿಗೆ ತೆರಳದೆ ಆನ್‌ಲೈನ್‌ನಲ್ಲಿ ಆಡಿಷನ್‌ ನಡೆಸಿದ್ದೇವೆ. ಅದೇ ರೀತಿ ಈ ವರ್ಷದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಭಾಗವಹಿಸಲು ಅವಕಾಶ ಇಲ್ಲದ ಕಾರಣ ಲೈಫ್‌ಲೈನ್‌ ನಿಂದ ‘ಆಡಿಯನ್ಸ್ ಪೋಲ್’ ತೆಗೆದು ಹಾಕಲಾಗಿದೆ ಎಂದು ವಿವರಿಸಿದ್ದಾರೆ.

ಇಪ್ಪತ್ತು ವರ್ಷಗಳಲ್ಲಿ ಆಡಿಯನ್ಸ್ ಪೋಲ್ ಇಲ್ಲದೆ ಇದೇ ಮೊದಲ ಬಾರಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ. ಇದಕ್ಕೆ ಬದಲಾಗಿ, 'ವಿಡಿಯೋ ಎ ಫ್ರೆಂಡ್' ಲೈಫ್‌ಲೈನ್ ಲಭ್ಯವಾಗಿಸಿದ್ದೇವೆ... ಕಾರ್ಯಕ್ರಮದ ಮೊದಲ ಸುತ್ತಿನ 'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ನಾವು ಕೆಲ ಬದಲಾವಣೆ ಮಾಡಿದ್ದೇವೆ. ಕಳೆದ ಸೀಜನ್ ವರೆಗೆ ಈ ಸುತ್ತಿನಲ್ಲಿ 10 ಮಂದಿ ಭಾಗವಹಿಸುತ್ತಿದ್ದರು. ಸಾಮಾಜಿಕ ಅಂತರ ಪಾಲಿಸುವ ಉದ್ದೇಶದಿಂದ ಕೇವಲ ಎಂಟು ಜನರು ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ. ಅಮಿತಾಬ್ ಅವರ ಕುರ್ಚಿ ಹಾಗೂ ಹಾಟ್ ಸೀಟ್ ನಡುವಿನ ಅಂತರವನ್ನು ಹೆಚ್ಚಿಸಲಾಗಿದೆ.

ಅದೇ ರೀತಿ ಸ್ಪರ್ಧಿಗಳನ್ನು ಪರಿಚಯಿಸುವ ವಿಶೇಷ ವೀಡಿಯೊವನ್ನು ಕಾರ್ಯಕ್ರಮದ ಆರಂಭದಲ್ಲಿ ತೋರಿಸಲಾಗುತ್ತಿತ್ತು. ಆದರೆ, ಈ ವರ್ಷ ಬೇರೆ ಬೇರೆ ಸ್ಥಳಗಳಿಗೆ ಹೋಗಲು ಸಾಧ್ಯವಾಗದ ಕಾರಣ .. ನಾವು ಸ್ಪರ್ಧಿಗಳಿಗೆ ವಿಡಿಯೋ ಮಾಡಲು ಸೂಚಿಸಿದ್ದೇವೆ. ವೀಡಿಯೊ ಚಿತ್ರೀಕರಣ ವೇಳೆ ಆನ್‌ಲೈನ್‌ನಲ್ಲಿ ಹಲವು ಸಲಹೆಗಳನ್ನು ನೀಡುತ್ತಿದ್ದೇವೆ ಎಂದು ಸುಜಾತಾ ಹೇಳಿದ್ದಾರೆ. ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗಲಿರುವ ಕೆಬಿಸಿ ಸೀಸನ್ 12ರ ಚಿತ್ರೀಕರಣದಲ್ಲಿ ಅಮಿತಾಬ್ ಈಗಾಗಲೇ ಪಾಲ್ಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com