ಕೋಲ್ಕತ್ತಾ: ಡರ್ಟಿ ಪಿಕ್ಚರ್ ನಟಿ ಆರ್ಯಾ ಬ್ಯಾನರ್ಜಿ ನಿಗೂಢ ಸಾವು!

ಡರ್ಟಿ ಪಿಕ್ಚರ್ ಸೇರಿದಂತೆ ಬಾಲಿವುಡ್ ನಲ್ಲಿ ನಟಿಸಿದ್ದ 35 ವರ್ಷದ ನಟಿ ಆರ್ಯಾ ಬ್ಯಾನರ್ಜಿ ದಕ್ಷಿಣ ಕೋಲ್ಕತ್ತಾದಲ್ಲಿರುವ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 

Published: 12th December 2020 11:46 AM  |   Last Updated: 12th December 2020 12:22 PM   |  A+A-


Bollywood actor Arya Banerjee found dead at posh south Kolkata home

ಕೋಲ್ಕತ್ತಾ: ಡರ್ಟಿ ಪಿಕ್ಚರ್ ನಟಿ ಆರ್ಯಾ ಬ್ಯಾನರ್ಜಿ ನಿಗೂಢ ಸಾವು!

Posted By : Srinivas Rao BV
Source : Online Desk

ಕೋಲ್ಕತ್ತಾ: ಡರ್ಟಿ ಪಿಕ್ಚರ್ ಸೇರಿದಂತೆ ಬಾಲಿವುಡ್ ನಲ್ಲಿ ನಟಿಸಿದ್ದ 35 ವರ್ಷದ ನಟಿ ಆರ್ಯಾ ಬ್ಯಾನರ್ಜಿ ದಕ್ಷಿಣ ಕೋಲ್ಕತ್ತಾದಲ್ಲಿರುವ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 

ಆರ್ಯಾ ಬ್ಯಾನರ್ಜಿ ನಟಿಯ ಸ್ಕ್ರೀನ್ ಹೆಸರಾಗಿದ್ದು, ದೇವದತ್ತ ಬ್ಯಾನರ್ಜಿ ಆಕೆಯ ನಿಜವಾದ ಹೆಸರಾಗಿದೆ. ಸಿತಾರ್ ವಾದಕ ನಿಖಿಲ್ ಬ್ಯಾನರ್ಜಿಯ ಪುತ್ರಿಯಾಗಿದ್ದಾರೆ.

ಮೂಗಿನಲ್ಲಿ ರಕ್ತಸ್ರಾವ ಕಂಡುಬಂದಿದ್ದು, ರಕ್ತದ ಮಡುವಿನಲ್ಲಿ ದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಆರ್ಯಾ ಬ್ಯಾನರ್ಜಿ ಅವರ ಸಹೋದರಿ ಸಿಂಗಪೂರ್ ನಲ್ಲಿದ್ದು ಆಕೆ ಕೋಲ್ಕತ್ತಾದ ನಿವಾಸದಲ್ಲಿ ಒಂಟಿಯಾಗಿದ್ದರು. ಆಕೆ ಇದ್ದ ಕೋಠಡಿಯಲ್ಲಿ ಖಾಲಿಯಾಗಿದ್ದ ಮದ್ಯದ ಬಾಟಲ್ ಗಳೂ ಪತ್ತೆಯಾಗಿವೆ. ಎಂದಿನಂತೆ ಬ್ಯಾನರ್ಜಿಯ ಮನೆಕೆಲಸದಾಕೆ ಕೆಲಸಕ್ಕಾಗಿ ಬಂದಿದ್ದರು. ಆದರೆ ಬ್ಯಾನರ್ಜಿ ಮನೆ ಬಾಗಿಲು ತೆಗೆದಿರಲಿಲ್ಲ. ಪ್ರತಿಕ್ರಿಯೆ ಬಾರದಿದ್ದಾಗ ನೆರೆ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಳಗಡೆಯಿಂದ ಮನೆಯ ಬಾಗಿಲು ಲಾಕ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

Stay up to date on all the latest ಬಾಲಿವುಡ್ news
Poll
Yeddyurappa

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಕರ್ನಾಟಕ ಬಜೆಟ್ 2021 ಕುರಿತು ನಿಮ್ಮ ಅಭಿಪ್ರಾಯ...


Result
ಸಮತೋಲಿತ ಬಜೆಟ್
ಗೊತ್ತುಗುರಿ ಇಲ್ಲದ ಬಜೆಟ್
flipboard facebook twitter whatsapp