ಪ್ಲೀಸ್ ಅದು ಸಿಕ್ಕಿದರೆ ನನಗೆ ತಲುಪಿಸಿ; ಬಾಲಿವುಡ್ ನಟಿ ಜೂಯಿ ಚಾವ್ಲಾ ಮನವಿ

'ಕಳೆದ 15 ವರ್ಷಗಳಿಂದ ಅದನ್ನು ಧರಿಸುತ್ತಿದ್ದೆ, ಅವು ನನ್ನೊಂದಿಗೆ ಇದ್ದವು. ಆದರೆ, ಅದರಲ್ಲೊಂದು ಎಲ್ಲಿಯೂ ಬಿದ್ದುಹೋಗಿದೆ. ಯಾರಿಗಾದರೂ ಸಿಕ್ಕಿದರೆ... ನನಗೆ ತಲುಪಿಸಿ  ಪ್ಲೀಸ್' ಎಂದು ಮನವಿ ಮಾಡಿಕೊಂಡಿದ್ದಾರೆ.

Published: 14th December 2020 08:13 PM  |   Last Updated: 15th December 2020 05:23 PM   |  A+A-


juhi chawla diamond earring missing

ಜೂಹಿ ಚಾವ್ಲಾ

Posted By : Vishwanath S
Source : UNI

ಮುಂಬೈ: 'ಕಳೆದ 15 ವರ್ಷಗಳಿಂದ ಅದನ್ನು ಧರಿಸುತ್ತಿದ್ದೆ, ಅವು ನನ್ನೊಂದಿಗೆ ಇದ್ದವು. ಆದರೆ, ಅದರಲ್ಲೊಂದು ಎಲ್ಲಿಯೂ ಬಿದ್ದುಹೋಗಿದೆ. ಯಾರಿಗಾದರೂ ಸಿಕ್ಕಿದರೆ... ನನಗೆ ತಲುಪಿಸಿ  ಪ್ಲೀಸ್' ಎಂದು ಮನವಿ ಮಾಡಿಕೊಂಡಿದ್ದಾರೆ.

ಬಾಲಿವುಡ್ ನಟಿ ಜೂಹಿ ಚಾವ್ಲಾ. ಈ ಸಂಬಂಧ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾನುವಾರ ಪೋಸ್ಟ್ ಮಾಡಿದ್ದಾರೆ.

ಅಷ್ಟಕ್ಕೂ ನಟಿ ಜೂಹಿ ಚಾವ್ಲಾ ಕಳೆದುಕೊಂಡಿರುವುದು ಏನೆಂದರೆ ವಜ್ರದ ಕಿವಿ ರಿಂಗು. ಇಂದು ಬೆಳಗ್ಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನನ್ನ ವಜ್ರದ ಕಿವಿ ರಿಂಗು ಎಲ್ಲೋ ಬಿದ್ದು ಹೋಗಿದೆ.  

ಅದು ಯಾರಿಗಾದರೂ ಸಿಕ್ಕಿದರೆ,  ದಯವಿಟ್ಟು ಅದನ್ನು ನನಗೆ ತಲುಪಿಸಿದರೆ ತುಂಬಾ ಸಂತೋಷವಾಗುತ್ತದೆ, ಸಾಧ್ಯವಾಗದಿದ್ದರೆ. ಸಮೀಪದ ಪೊಲೀಸ್ ಠಾಣೆಗಾದರೂ ತಲುಪಿಸಬಹುದು. ಒಳ್ಳೆಯ ಬಹುಮಾನ ನೀಡುತ್ತೇನೆ.

ಕಳೆದ 15 ವರ್ಷಗಳಿಂದ ವಜ್ರದ ಕಿವಿ ರಿಂಗ್ ಗಳನ್ನು ಪ್ರತಿದಿನ ಬಳಸುತ್ತಿದ್ದೇನೆ. ದಯವಿಟ್ಟು ಅದನ್ನು ಹುಡುಕಲು ಸಹಾಯ ಮಾಡಿ ಎಂದು ಜೂಹಿ ಕೋರಿದ್ದಾರೆ.

Stay up to date on all the latest ಬಾಲಿವುಡ್ news
Poll
Yeddyurappa

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಕರ್ನಾಟಕ ಬಜೆಟ್ 2021 ಕುರಿತು ನಿಮ್ಮ ಅಭಿಪ್ರಾಯ...


Result
ಸಮತೋಲಿತ ಬಜೆಟ್
ಗೊತ್ತುಗುರಿ ಇಲ್ಲದ ಬಜೆಟ್
flipboard facebook twitter whatsapp