ಡ್ರಗ್ಸ್ ಕೇಸ್: ಅರ್ಜುನ್ ರಾಂಪಾಲ್ ಗೆ ಸಮನ್ಸ್ ನೀಡಿದ ಎನ್ ಸಿಬಿ
ಡ್ರಗ್ಸ್ ಕೇಸ್ ನಲ್ಲಿ ವಿಚಾರಣೆಗಾಗಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರಿಗೆ ನಾರ್ಕೋಟಿಕ್ಸ್ ಕಂಟ್ರೊಲ್ ಬ್ಯೂರೋ (ಎನ್ ಸಿಬಿ) ಮಂಗಳವಾರ ಸಮನ್ಸ್ ನೀಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 15th December 2020 04:49 PM | Last Updated: 15th December 2020 04:49 PM | A+A A-

ನಟ ಅರ್ಜುನ್ ರಾಂಪಾಲ್
ಮುಂಬೈ: ಡ್ರಗ್ಸ್ ಕೇಸ್ ನಲ್ಲಿ ವಿಚಾರಣೆಗಾಗಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರಿಗೆ ನಾರ್ಕೋಟಿಕ್ಸ್ ಕಂಟ್ರೊಲ್ ಬ್ಯೂರೋ (ಎನ್ ಸಿಬಿ) ಮಂಗಳವಾರ ಸಮನ್ಸ್ ನೀಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್- ಡ್ರಗ್ಸ್ ನಂಟಿನ ಬಗ್ಗೆ ತನಿಖೆ ನಡೆಸುತ್ತಿರುವ ಎನ್‌ಸಿಬಿ ತಂಡದ ಮುಂದೆ ವಿಚಾರಣೆಗೆ ಹಾಜರಾಗಲು ರಾಂಪಾಲ್ ಅವರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಡ್ರಗ್ಸ್ ಕೇಸ್ ನಲ್ಲಿ ಎರಡನೇ ಬಾರಿಗೆ ಎನ್ ಸಿಬಿ, ಅರ್ಜುನ್ ರಾಂಪಾಲ್ ಅವರನ್ನು ವಿಚಾರಣೆ ನಡೆಸುತ್ತಿದೆ.
ಈ ಹಿಂದೆ ನವೆಂಬರ್ 13 ರಂದು ಸುಮಾರು ಏಳು ಗಂಟೆಗಳ ಕಾಲ ಅರ್ಜುನ್ ರಾಂಪಾಲ್ ಅವರನ್ನು ಎನ್ ಸಿಬಿ ವಿಚಾರಣೆಗೊಳಪಡಿಸಿತ್ತು.
ಡ್ರಗ್ಸ್ ಕೇಸಿನಲ್ಲಿ ಬಂಧಿಸಲ್ಪಟ್ಟ ಕೆಲವು ವ್ಯಕ್ತಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಪ್ರಕಾರ ಕಳೆದ ತಿಂಗಳು ಮುಂಬೈಯಲ್ಲಿನ ಬಾಂದ್ರಾದಲ್ಲಿರುವ ಅರ್ಜನ್ ರಾಂಪಾಲ್ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಎನ್ ಸಿಬಿ, ಕೆಲವೊಂದು ನಿಷೇಧಿತ ಔಷಧಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳನ್ನು ವಶಕ್ಕೆ ಪಡೆದುಕೊಂಡಿತ್ತು.
ಇದೇ ಕೇಸಿಗೆ ಸಂಬಂಧಪಟ್ಟಂತೆ ಅರ್ಜುನ್ ರಾಂಪಾಲ್ ಅವರ ಪಾಲುದಾರ ಗೇಬ್ರಿಯೆಲಾ ಡೆಮ್ಟ್ರಿಯಡ್ಸ್ ಅವರನ್ನು ಎನ್ ಸಿಬಿ ಕಳೆದ ತಿಂಗಳು ವಿಚಾರಣೆಗೊಳಪಡಿಸಿತ್ತು.