2020ರ ಫಿಲ್ಮ್‌ಫೇರ್ ಪ್ರಶಸ್ತಿಗಳ ಬಾಚಿದ 'ಗಲ್ಲಿ ಬಾಯ್!' ಇಲ್ಲಿದೆ ಕಂಪ್ಲೀಟ್ ವಿನ್ನರ್ಸ್ ಲಿಸ್ಟ್

ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್ಸ್ 2020 ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ರಾತ್ರಿ ನಡೆದಿದ್ದು "ಗಲ್ಲಿ ಬಾಯ್" ಚಿತ್ರಕ್ಕೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
2020ರ ಫಿಲ್ಮ್‌ಫೇರ್ ಪ್ರಶಸ್ತಿಗಳ ಬಾಚಿದ 'ಗಲ್ಲಿ ಬಾಯ್!' ಇಲ್ಲಿದೆ ಕಂಪ್ಲೀಟ್ ವಿನ್ನರ್ಸ್ ಲಿಸ್ಟ್

ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್ಸ್ 2020 ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ರಾತ್ರಿ ನಡೆದಿದ್ದು "ಗಲ್ಲಿ ಬಾಯ್" ಚಿತ್ರಕ್ಕೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ರಣವೀರ್ ಸಿಂಗ್, ಆಲಿಯಾ ಭಟ್, ಆಯುಷ್ಮಾನ್ ಖುರಾನಾ ಮತ್ತು ಇತರರ ಉಪಸ್ಥಿತಿಯಲ್ಲಿ ಅಸ್ಸಾಂ ನಲ್ಲಿ ಈ ಕಾರ್ಯಕ್ರಮ ನಡೆದಿದೆ. "ಗಲ್ಲಿ ಬಾಯ್"ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ, ಅದೇ ಚಿತ್ರದ ಅಭಿನಯಕ್ಕಾಗಿ ರಣವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ. ಅಲ್ಲದೆ ಅದೇ ಚಿತ್ರದ ಸಫೀನಾ ಪಾತ್ರಧಾರಿಯಾಗಿದ್ದ ಆಲಿಯಾ ಭತ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.

ಅನುಭವ್ ಸಿನ್ಹಾ ನಿರ್ದೇಶನದ ಆರ್ಟಿಕಲ್ 15. ಚಿತ್ರಕ್ಕೆ ವಿಮರ್ಶಕರ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಆರ್ಟಿಕಲ್ 15 ರಲ್ಲಿನ ಅಭಿನಯಕ್ಕಾಗಿ ಆಯುಷ್ಮಾನ್ ಖುರಾನಾ ಅತ್ಯುತ್ತಮ ನಟ ವಿಮರ್ಶಕರ ಪ್ರಶಸ್ತಿಯನ್ನು ಗೆದ್ದಿದ್ದಾರೆ

ಫಿಲ್ಮ್ ಫೇರ್ ಪ್ರಶಸ್ತಿ ಪೂರ್ಣ ಪಟ್ಟಿ ಹೀಗಿದೆ-

  • ಅತ್ಯುತ್ತಮ ಚಿತ್ರ: ಗಲ್ಲಿ ಬಾಯ್
  • ಅತ್ಯುತ್ತಮ ಚಿತ್ರಕ್ಕಾಗಿ ವಿಮರ್ಶಕರ ಪ್ರಶಸ್ತಿ: ಸೋಂಚಿರಿಯಾ ಮತ್ತು ಆರ್ಟಿಕಲ್ 15 
  • ಅತ್ಯುತ್ತಮ ನಟಿ ಆಲಿಯಾ ಭಟ್, ಗಲ್ಲಿ ಬಾಯ್
  • ಅತ್ಯುತ್ತಮ ನಟ ರಣವೀರ್ ಸಿಂಗ್, ಗಲ್ಲಿ ಬಾಯ್
  • ವಿಮರ್ಶಕರ ಅತ್ಯುತ್ತಮ ನಟಿ ಭೂಮಿ ಪೆಡ್ನೇಕರ್ ಮತ್ತು ತಾಪ್ಸೀ ಪನ್ನು, ಸಾಂಧ್ ಕಿ ಆಂಖ್
  • ವಿಮರ್ಶಕರ ಅತ್ಯುತ್ತಮ ನಟ ಆಯುಷ್ಮಾನ್ ಖುರಾನಾ, ಆರ್ಟಿಕಲ್ 15
  • ಅತ್ಯುತ್ತಮ ನಿರ್ದೇಶಕ: ಜೋಯಾ ಅಖ್ತರ್, ಗಲ್ಲಿ ಬಾಯ್
  • ಅತ್ಯುತ್ತಮ ಸಾಹಿತ್ಯ: ಡಿವೈನ್ ಮತ್ತು ಅಂಕಿತ್ ತಿವಾರಿ, ಗಲ್ಲಿ ಬಾಯ್
  • ಅತ್ಯುತ್ತಮ ಸಂಗೀತ ಆಲ್ಬಮ್: ಗಲ್ಲಿ ಬಾಯ್ ಮತ್ತು ಕಬೀರ್ ಸಿಂಗ್
  • ಅತ್ಯುತ್ತಮ ಹಿನ್ನೆಲೆ ಗಾಯಕಿ : ಶಿಲ್ಪಾ ರಾವ್, “ಘುಂಗ್ರೂ”
  • ಅತ್ಯುತ್ತಮ ಹಿನ್ನೆಲೆ ಗಾಯಕ (: ಅರಿಜಿತ್ ಸಿಂಗ್, “ಕಲಾಂಕ್ ನಹಿ ಇಶ್ಕ್ ಹೈ”
  • ಅತ್ಯುತ್ತಮ ನವನಟಿ: ಅನನ್ಯ ಪಾಂಡೆ, ಸ್ಟೂಡೆಂಟ್ ಆಫ್ ದಿ ಇಯರ್  2
  • ಅತ್ಯುತ್ತಮ ನವನಟ: ಅಭಿಮನ್ಯು ದಸ್ಸಾನಿ, ಮರ್ದ್ ಕೊ ದರ್ದ್ ನಹೀ ಹೋತಾ
  • ಅತ್ಯುತ್ತಮ ಚೊಚ್ಚಲ ನಿರ್ದೇಶಕ:  ಆದಿತ್ಯ ಧಾರ್, ಉರಿ ದಿ ಸರ್ಜಿಕಲ್ ಸ್ಟ್ರೈಕ್
  • ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಅಮೃತ ಸುಭಾಷ್, ಗಲ್ಲಿ ಬಾಯ್
  • ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ಸಿದ್ಧಾಂತ್ ಚತುರ್ವೇದಿ, ಗಲ್ಲಿ ಬಾಯ್
  • ಅತ್ಯುತ್ತಮ ನೃತ್ಯ ಸಂಯೋಜನೆ: ರೆಮೋ ಡಿಸೋಜಾ, “ಘರ್ ಮೋರ್ ಪಾರ್ಡೆಸಿಯಾ,” ಕಲಾಂಕ್
  • ಅತ್ಯುತ್ತಮ ಸಂಭಾಷಣೆ: ವಿಜಯ್ ಮೌರ್ಯ, ಗಲ್ಲಿ ಬಾಯ್
  • ಅತ್ಯುತ್ತಮ ಚಿತ್ರಕಥೆ: ರೀಮಾ ಕಾಗ್ತಿ ಮತ್ತು ಜೊಯಾ ಅಖ್ತರ್, ಗಲ್ಲಿ ಬಾಯ್
  • ಭವಿಷ್ಯದ ಸಂಗೀತ ಪ್ರತಿಭೆಗೆ ನೀಡುವ ಆರ್.ಡಿ. ಬರ್ಮನ್ ಪ್ರಶಸ್ತಿ: ಸಶ್ವತ್ ಸಚ್‌ದೇವ್, ಉರಿ: ದಿ ಸರ್ಜಿಕಲ್ ಸ್ಟ್ರೈಕ್
  • ಬಾಲಿವುಡ್ ಫ್ಯಾಷನ್‌ಗೆ 30 ವರ್ಷಗಳ ಅತ್ಯುತ್ತಮ ಕೊಡುಗೆ(30 Years of Outstanding Contribution to Bollywood Fashion:): ಮನೀಶ್ ಮಲ್ಹೋತ್ರಾ
  • ಎಕ್ಸೆಲೆನ್ಸ್ ಇನ್ ಸಿನಿಮಾ: ಗೋವಿಂದ
  • ಜೀವಮಾನ ಸಾಧನೆ ಪ್ರಶಸ್ತಿ: ರಮೇಶ್ ಸಿಪ್ಪಿ
     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com