ಸಲ್ಮಾನ್ ಖಾನ್ ಮುಂದಿನ ಚಿತ್ರ 'ಕಬೀ ಈದ್ ಕಬೀ ದಿವಾಲಿ'

ದಬಾಂಗ್ 3 ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡದೆ ಸ್ವಲ್ಪ ಮಟ್ಟಿನ ವರ್ಚಸ್ಸು ಕುಂದಿರುವ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ ಹೊಸ ಚಿತ್ರದ ಘೋಷಣೆಯಾಗಿದೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬೈ: ದಬಾಂಗ್ 3 ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡದೆ ಸ್ವಲ್ಪ ಮಟ್ಟಿನ ವರ್ಚಸ್ಸು ಕುಂದಿರುವ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ ಹೊಸ ಚಿತ್ರದ ಘೋಷಣೆಯಾಗಿದೆ. 

ಕಬೀ ಈದ್ ಕಬೀ ದಿವಾಲಿ ಸಲ್ಮಾನ್ ಖಾನ್ ಅವರ ಹೊಸ ಚಿತ್ರವಾಗಿದೆ. ಸಜಿದ್ ನಾಡಿಯಾಡ್ವಾಲಾ ಕಥೆ ಬರೆದು ನಿರ್ಮಿಸುತ್ತಿರುವ ಈ ಚಿತ್ರವನ್ನು ಫರ್ಹಾದ್ ಸಾಂಜೀ ನಿರ್ದೇಶಿಸುತ್ತಿದ್ದಾರೆ. ಟ್ವೀಟರ್ ನಲ್ಲಿ ಈ ವಿಷಯವನ್ನು ಸಲ್ಮಾನ್ ಖಾನ್ ಅವರೇ ತಿಳಿಸಿದ್ದಾರೆ.

ಹೌಸ್ ಪುಲ್ 4 ಚಿತ್ರ ನಿರ್ದೇಶಕ ಫರ್ಹಾದ್ ಸಾಂಜಿ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ 54 ವರ್ಷದ ಸಲ್ಮಾನ್ ಖಾನ್ ಹೇಳಿದ್ದಾರೆ.

ಇತ್ತೀಚಿಗೆ ತೆರೆ ಕಂಡ ಸಲ್ಮಾನ್ ಖಾನ್ ಅಭಿನಯದ ದಬಾಂಗ್ -3 ನಿರೀಕ್ಷಿತ ಪ್ರಮಾಣದಲ್ಲಿ ಹಣ ಮಾಡಲಿಲ್ಲ. ಪ್ರಭುದೇವ ನಿರ್ದೇಶನದ ರಾಧೆ ಚಿತ್ರ ಈ ವರ್ಷ ಈದ್ ನಲ್ಲಿ ತೆರೆಗೆ ಅಪ್ಪಳಿಸಲಿದೆ. 2021ಕ್ಕೆ ಕಬೀ  ಈದ್ ಕಬೀ ದಿವಾಲಿ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com