ಹುಟ್ಟುಹಬ್ಬದಂದೇ ನವಾಜುದ್ದೀನ್ ಸಿದ್ಧಿಕಿಗೆ ಶಾಕ್: ಡೈವೋರ್ಸ್ ನೊಟೀಸ್ ಕಳುಹಿಸಿದ ಪತ್ನಿ

ಈ ವಿವಾಹಕ್ಕೆ ನಾನು ಅಂತ್ಯ ಹಾಡುತ್ತಿದ್ದೇನೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಪತ್ನಿ ಅಲಿಯಾ ಸಿದ್ದಿಕಿ ವಾಟ್ಸಾಪ್ ಮತ್ತು ಇಮೇಲ್ ಮೂಲಕ ನೊಟೀಸ್ ಕಳುಹಿಸಿದ್ದಾರೆ.

Published: 19th May 2020 11:31 AM  |   Last Updated: 19th May 2020 11:31 AM   |  A+A-


nawajuddin siddiki with wife

ಪತ್ನಿ ಜೊತೆ ನವಾಜುದ್ದೀನ್ ಸಿದ್ಧಿಕಿ

Posted By : Shilpa D
Source : The New Indian Express

ನವದೆಹಲಿ: ಈ ವಿವಾಹಕ್ಕೆ ನಾನು ಅಂತ್ಯ ಹಾಡುತ್ತಿದ್ದೇನೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಪತ್ನಿ ಅಲಿಯಾ ಸಿದ್ದಿಕಿ ವಾಟ್ಸಾಪ್ ಮತ್ತು ಇಮೇಲ್ ಮೂಲಕ ನೊಟೀಸ್ ಕಳುಹಿಸಿದ್ದಾರೆ.

11 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಅಲಿಯಾ ವಾಟ್ಸಾಪ್ ಮೂಲಕ ನೊಟೀಸ್ ಕಳುಹಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಳೆದ ವಾರ  ನವಾಜುದ್ದೀನ್ ಸಿದ್ಧಿಕಿ ತಮ್ಮ ತವರೂರಾದ ಬುಧಾನಾ ಗೆ ತೆರಳಿದ್ದು ಎರಡು ವಾರಗಳ ಕ್ವಾರಂಟೈನ್ ನಲ್ಲಿದ್ದಾರೆ.

ನಾನು ಲೀಗಲ್ ನೋಟೀಸ್ ನೀಡಿದ್ದೇನೆ, ಆದರೆ ಅದಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಕಳೆದ 10 ವರ್ಷಗಳಿಂದ ಹಲವ ಸಮಸ್ಯೆಗಳನ್ನು ಎದುರಿಸಿದ್ದೇನೆ, ಹೀಗಾಗಿ ವಿಚ್ಛೇಧನದ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ. ಲಾಕ್ ಡೌನ್ ಕಾರಣದಿಂದಾಗಿ ಆತ್ಮಾವಲೋಕನ ಸಾಧ್ಯವಾಯಿತು. ಹೀಗಾಗಿ ನಾನು ಮದುವೆ ಅಂತ್ಯಗೊಳಿಸುವ ನಿರ್ಧಾರಕ್ಕೆ
ಬಂದಿದ್ದೇನೆ ಎಂದು ಹೇಳಿದ್ದಾರೆ.
 

Stay up to date on all the latest ಬಾಲಿವುಡ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp