ಅನುಷ್ಕಾ ಶರ್ಮಾಗೆ ವಿಚ್ಚೇದನ ನೀಡುವಂತೆ ಬಿಜೆಪಿ ಶಾಸಕರಿಂದ ವಿರಾಟ್ ಕೊಹ್ಲಿಗೆ ಒತ್ತಾಯ!

ಅನುಷ್ಕಾ ಶರ್ಮಾ ನಿರ್ಮಾಣದ "ಪಾತಾಳ್ ಲೋಕ್" ವೆಬ್ ಸರಣಿ ಇತ್ತೀಚೆಗೆ  ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಈ ನಡುವೆ ಬಿಜೆಪಿಯ ಶಾಸಕರೊಬ್ಬರು ಸರಣಿಯಲ್ಲಿ ತನ್ನ ಅನುಮತಿಯಿಲ್ಲದೆ ತನ್ನ ಚಿತ್ರವನ್ನು ಬಳಸಿಕೊಂಡಿರುವ ಕಾರಣ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಮಾದ್ಯಮದವರೊಂದಿಗೆ  ಮಾತನಾ

Published: 27th May 2020 11:15 AM  |   Last Updated: 27th May 2020 11:15 AM   |  A+A-


ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ನಂದಕಿಶೋರ್ ಗುರ್ಜಾರ್

Posted By : raghavendra
Source : Online Desk

ಅನುಷ್ಕಾ ಶರ್ಮಾ ನಿರ್ಮಾಣದ "ಪಾತಾಳ್ ಲೋಕ್" ವೆಬ್ ಸರಣಿ ಇತ್ತೀಚೆಗೆ  ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಈ ನಡುವೆ ಬಿಜೆಪಿಯ ಶಾಸಕರೊಬ್ಬರು ಸರಣಿಯಲ್ಲಿ ತನ್ನ ಅನುಮತಿಯಿಲ್ಲದೆ ತನ್ನ ಚಿತ್ರವನ್ನು ಬಳಸಿಕೊಂಡಿರುವ ಕಾರಣ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಮಾದ್ಯಮದವರೊಂದಿಗೆ  ಮಾತನಾಡಿದ ಶಾಸಕರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಅನುಷ್ಕಾ ಶರ್ಮಾ ಅವರಿಗೆ ವಿಚ್ಚೇದನ ನೀಡಬೇಕೆಂದು ಒತ್ತಾಯಿಸಿದ್ದಾರೆ. 

ಉತ್ತರ ಪ್ರದೇಶದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್,ವಿರಾಟ್ ಕೊಹ್ಲಿ ಪತ್ನಿ, ನಟಿ, ನಿರ್ಮಾಪಕಿ ಅನುಷ್ಕಾ ವಿರುದ್ಧ ದೂರು ದಾಖಲಿಸಿದ್ದಾರೆ. "ಪಾತಾಳ್ ಲೋಕ್" ವೆಬ್ ಸರಣಿಯಲ್ಲಿ ತಮ್ಮ ಅನುಮತಿ ಇಲ್ಲದೆ  ತಮ್ಮ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಸರಣಿಯನ್ನು ನಿಷೇಧಿಸುವಂತೆ ಶಾಸಕರು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ದೇಕರ್ ​​ಅವರಿಗೆ ಪತ್ರ ಬರೆದಿದ್ದಾರೆ. ಕೋಮು ಕೋಲಾಹಲಕ್ಕೆ ಕಾರಣವಾದ ಆರೋಪದ ಮೇಲೆ ಅವರು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅನುಷ್ಕಾ ವಿರುದ್ಧ ಅನುಷ್ಕಾ ದೇಶದ್ರೋಹವೆಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತಕ್ಕಾಗಿ ಕ್ರಿಕೆಟ್ ಆಡುವ ರಾಷ್ಟ್ರೀಯವಾದಿನಾಯಕರಾಗಿದ್ದು ಇಂತಹವರು ಅನುಷ್ಕಾ ಶರ್ಮಾ ಅವರಿಗೆ ವಿಚ್ಚೇದನ ನೀಡಬೇಕೆಂದು ನಾನು ಸಲಹೆ ನೀಡುತ್ತೇನೆ." “ವಿರಾಟ್ ಕೊಹ್ಲಿ ದೇಶ್ ಭಕ್ತ್ ಹೈ, ದೇಶ್ ಕೆ ಲಿಯೆ ಖೇಲೆ ಹೈ. ಅನುಷ್ಕಾ ಕೋ ತಲಕ್ ದೇ ದೇನಾ ಚಾಹಿಯೆ ”. ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ, ಅನುಷ್ಕಾ ತನ್ನ ಶೋ ಒಂದರಲ್ಲಿ ಜಾತಿವಾದಿ ಪದ ಬಳಕೆ ಮಾಡಿದ್ದ ಕಾರಣ ಕಾನೂನು ರೀತ್ಯಾ ಅವರ ವಿರುದ್ಧ ನೋಟೀಸ್ ಜಾರಿಯಾಗಿತ್ತು.ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ಮಾಪಕರಾದ ಅನುಷ್ಕಾ ಮತ್ತು ಅವರ ಸಹೋದರ ಕರ್ಣೇಶ್ ಶರ್ಮಾ ಅವರಿಗೆ ಲಾಯರ್ಸ್ ಗಿಲ್ಡ್ ಸದಸ್ಯ ವಿರೇನ್ ಶ್ರೀ ಗುರುಂಗ್ ಲೀಗಲ್ ನೊಟೀಸ್ ಕಳಿಸಿದ್ದರು.

 

 

"ಪಾತಾಳ್ ಲೋಕ್" ವೆಬ್ ಸರಣಿಯಲ್ಲಿ ಜೈದೀಪ್ ಅಹ್ಲಾವತ್, ನೀರಜ್ ಕಬಿ, ಅಭಿಷೇಕ್ ಬ್ಯಾನರ್ಜಿ, ಗುಲ್ ಪನಾಗ್, ಸ್ವಸ್ತಿಕ ಮುಖರ್ಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ


Stay up to date on all the latest ಬಾಲಿವುಡ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp