ಎನ್ ಸಿಬಿ ವಿಚಾರಣೆ: ಅರ್ಧದಲ್ಲಿಯೇ ಶೂಟಿಂಗ್ ನಿಲ್ಲಿಸಿ ಮುಂಬೈಗೆ ವಾಪಸಾದ ದೀಪಿಕಾ-ರಣವೀರ್
ಡ್ರಗ್ಸ್ ಕೇಸಿನ ವಿಚಾರಣೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಳೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ಮುಂದೆ ಹಾಜರಾಗಲಿದ್ದಾರೆ.
Published: 25th September 2020 08:14 AM | Last Updated: 25th September 2020 08:14 AM | A+A A-

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ(ಸಂಗ್ರಹ ಚಿತ್ರ)
ಪಣಜಿ: ಡ್ರಗ್ಸ್ ಕೇಸಿನ ವಿಚಾರಣೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಳೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ಮುಂದೆ ಹಾಜರಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ಗೋವಾಕ್ಕೆ ಚಿತ್ರದ ಶೂಟಿಂಗ್ ಗೆ ತೆರಳಿದ್ದ ದೀಪಿಕಾ ಮತ್ತು ರಣವೀರ್ ಸಿಂಗ್ ನಿನ್ನೆ ಅರ್ಧದಲ್ಲಿಯೇ ಮುಂಬೈಗೆ ವಾಪಾಸಾಗಿದ್ದಾರೆ.
ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೀವ್ರ ಭದ್ರತೆ ನಡುವೆ ಬಂದ ತಾರಾ ದಂಪತಿ ಚಾರ್ಟೆರ್ಡ್ ಫ್ಲೈಟ್ ನಲ್ಲಿ ಮುಂಬೈಗೆ ತೆರಳಿದರು.
ಇಂದು ಎನ್ ಸಿಬಿ ಮುಂದೆ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಹಾಜರಾಗಲಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನಡೆಯುತ್ತಿರುವ ವಿಚಾರಣೆ ಹಂತದಲ್ಲಿ ಚಿತ್ರರಂಗದಲ್ಲಿ ಮಾದಕ ವಸ್ತು ಸೇವನೆ, ಬಳಕೆ, ಮಾರಾಟದ ಬಗ್ಗೆ ಮಾಹಿತಿ ಹೊರಬಿದ್ದ ನಂತರ ಆ ಬಗ್ಗೆ ವಿಚಾರಣೆ ವ್ಯಾಪಕವಾಗಿದೆ.