ಕೊರೋನಾ ಸಂಕಷ್ಟ: 'ಐ ಆಮ್ ಆಕ್ಸಿಜನ್ ಮ್ಯಾನ್' ಅಭಿಯಾನಕ್ಕೆ ನಟ ವಿವೇಕ್ ಒಬೆರಾಯ್ 25 ಲಕ್ಷ ರೂ. ದೇಣಿಗೆ

ಕೊರೋನಾ ವೈರಸ್ ನಿಂದ ಇಡೀ ದೇಶವೇ ಸಂಕಷ್ಟದಲ್ಲಿ ಮುಳುಗಿದ್ದು ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ವಿವೇಕ್ ಒಬೇರಾಯ್
ವಿವೇಕ್ ಒಬೇರಾಯ್
Updated on

ನವದೆಹಲಿ: ಕೊರೋನಾ ವೈರಸ್ ನಿಂದ ಇಡೀ ದೇಶವೇ ಸಂಕಷ್ಟದಲ್ಲಿ ಮುಳುಗಿದ್ದು ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ತಾವೇ ಶುರು ಮಾಡಿರುವ 'ಐ ಆಮ್ ಆಕ್ಸಿಜನ್ ಮ್ಯಾನ್' ಇನಿಷಿಯೇಟಿವ್‌ಗೆ ವಿವೇಕ್ ಒಬೆರಾಯ್ 25 ಲಕ್ಷ ರೂಪಾಯಿ ಮೀಸಲಿಟ್ಟಿದ್ದಾರೆ.

''ಕೋವಿಡ್ ಎರಡನೇ ಅಲೆಯಿಂದಾಗಿ ಜನ ಪಡುತ್ತಿರುವ ಕಷ್ಟ ಹೇಳತೀರದು. 'ಐ ಆಮ್ ಆಕ್ಸಿಜನ್ ಮ್ಯಾನ್' ಇನಿಷಿಯೇಟಿವ್‌ನಿಂದ ಅನೇಕರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ. ಈಗಾಗಲೇ ದೆಹಲಿಯಲ್ಲಿ 200 ಹಾಸಿಗೆ ಸಾಮರ್ಥ್ಯದ ಉಚಿತ ಕೋವಿಡ್ ಆಸ್ಪತ್ರೆ ತೆರೆಯಲಾಗಿದ್ದು, ಕಳೆದ ಕೆಲವು ವಾರಗಳಿಂದ ಅನೇಕ ಜನರ ಜೀವ ಉಳಿಸಲು ಶ್ರಮಿಸುತ್ತಿದ್ದೇವೆ'' ಎಂದು ನಟ ವಿವೇಕ್ ಒಬೆರಾಯ್ ತಿಳಿಸಿದ್ದಾರೆ.

ನನ್ನ ಕಡೆಯಿಂದ ಎಷ್ಟು ಸಾಧ್ಯವೋ, ಅಷ್ಟನ್ನು ಈ ಸೇವೆಗಾಗಿ ನೀಡುತ್ತಿದ್ದೇನೆ. ಡಾ.ವಿವೇಕ್ ಬಿಂದ್ರಾ ಮತ್ತು ತಂಡ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಚಿತ್ರರಂಗದಿಂದಲೂ ನನ್ನ ಅನೇಕ ಸ್ನೇಹಿತರು ಮುಂದೆ ಬಂದು ಸಹಾಯ ಮಾಡಿದ್ದಾರೆ. ನಾವೆಲ್ಲ ಒಟ್ಟಿಗೆ ನಿಂತು, ಒಬ್ಬರಿಗೊಬ್ಬರು ಸಹಾಯ ಮಾಡಿದರೆ ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದು ಅಂತ ವಿವೇಕ್ ಒಬೆರಾಯ್ ಹೇಳಿದ್ದಾರೆ.

'ಐ ಆಮ್ ಆಕ್ಸಿಜನ್ ಮ್ಯಾನ್ ಅಭಿಯಾನಕ್ಕೆ ವಿವೇಕ್ ಒಬೇರಾಯ್ ಹಿಂದು ಮುಂದು ನೋಡದೇ 25 ಲಕ್ಷ ರು ಹಣ ನೀಡಿದ್ದಾರೆ ಎಂದು ಡಾ. ವಿವೇಕ್ ಬಿಂದ್ರಾ ತಿಳಿಸಿದ್ದಾರೆ.

ಕರೋನಾ ಎರಡನೇ ಅಲೆಯಲ್ಲಿ  ಪ್ರತಿಯೊಬ್ಬರಿಗೂ ಸೂಕ್ತ ಚಿಕಿತ್ಸೆ ಬೇಕೆಂದು ಪಣ ತೊಟ್ಟಿರುವ ವಿವೇಕ್ ವೈದ್ಯಕೀಯ ಚಿಕಿತ್ಸೆ ಬಗ್ಗೆ ಸ್ವತಃ ಗಮನ ಹರಿಸುತ್ತಿದ್ದಾರೆ, ಐ ಯಾಮ್ ಆಕ್ಸಿಜನ್ ಮ್ಯಾನ್ ಜೊತೆಗೆ 200 ಬೆಡ್ ಗಳ ಆಸ್ಪತ್ರೆಯಲ್ಲಿ ದೆಹಲಿಯಲ್ಲಿ ಉಚಿತ ಚಿಕಿತ್ಸೆ ನೀಡಿ ಈಗಾಗಲೇ 1000 ಜೀವಗಳನ್ನು ಉಳಿಸಿದ್ದಾರೆ.

ಡಾ. ಬಿಂದ್ರಾ ಅವರೊಂದಿಗೆ, 'ಯುವ' ನಟ ಮಾರಣಾಂತಿಕ ವೈರಸ್‌ನ ಮೂರನೇ ಅಲೆಗೆ ಭಾರತವು ಸಂಪೂರ್ಣವಾಗಿ ವೈದ್ಯಕೀಯವಾಗಿ ಸಜ್ಜುಗೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com