'83' ಟ್ರೈಲರ್: ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಂಡದ್ದು ಹೀಗೆ...

ಭಾರತದ ಮೊದಲ ಕ್ರಿಕೆಟ್ ವಿಶ್ವಕಪ್ ಗೆಲುವಿನ ಕಥೆ ಹೇಳಲು ಹೊರಟಿರುವ ಬಹು ನಿರೀಕ್ಷಿತ ಸಿನಿಮಾ '83' ರ ಟ್ರೈಲರ್ ಬಿಡುಗಡೆಯಾಗಿದ್ದು, ರಣ್ವೀರ್ ಸಿಂಗ್, ದೀಪಿಕ ಪಡುಕೋಣೆ, ಪಂಕಜ್ ತ್ರಿಪಾಠಿ, ಜಿವಾ ಮೊದಲಾದ ನಟರು ಅಭಿನಯಿಸಿದ್ದಾರೆ. 
ಕಪಿಲ್ ದೇವ್ ಪಾತ್ರಧಾರಿ ರಣ್ವೀರ್ ಸಿಂಗ್
ಕಪಿಲ್ ದೇವ್ ಪಾತ್ರಧಾರಿ ರಣ್ವೀರ್ ಸಿಂಗ್
Updated on

ಭಾರತದ ಮೊದಲ ಕ್ರಿಕೆಟ್ ವಿಶ್ವಕಪ್ ಗೆಲುವಿನ ಕಥೆ ಹೇಳಲು ಹೊರಟಿರುವ ಬಹು ನಿರೀಕ್ಷಿತ ಸಿನಿಮಾ '83' ರ ಟ್ರೈಲರ್ ಬಿಡುಗಡೆಯಾಗಿದ್ದು, ರಣ್ವೀರ್ ಸಿಂಗ್, ದೀಪಿಕ ಪಡುಕೋಣೆ, ಪಂಕಜ್ ತ್ರಿಪಾಠಿ, ಜಿವಾ ಮೊದಲಾದ ನಟರು ಅಭಿನಯಿಸಿದ್ದಾರೆ. 

ಕಬೀರ್ ಖಾನ್ ನಿರ್ದೇಶನದ ಸಿನಿಮಾದ ಟ್ರೈಲರ್ ನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಪಿಲ್ ದೇವ್ ಪಾತ್ರಧಾರಿ ರಣ್ವೀರ್ ಸಿಂಗ್ "ಯೋಚಿಸಿವುದಕ್ಕೂ ಸಾಧ್ಯವಾಗದ 83 ರ ವಿಶ್ವಕಪ್ ಗೆಲುವನ್ನು ಸಾಧಿಸಿದವರ ನಂಬಲಾಗದ ನೈಜ ಕಥೆ" ಎಂಬ ಕ್ಯಾಪ್ಷನ್ ನೀಡಿದ್ದಾರೆ. 

ಡಿ.21 ರಂದು 83 ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ನಲ್ಲಿ ಬಿಡುಗಡೆಯಾಗಲಿದ್ದು 3 ಡಿಯಲ್ಲೂ ಬಿಡುಗಡೆಯಾಗುತ್ತಿರುವುದು ಸಿನಿಮಾದ ವಿಶೇಷತೆಯಾಗಿದೆ.
 
ಸಿನಿಮಾ ಹಾಗೂ ಕ್ರೀಡಾಪ್ರೇಮಿಗಳು ಕಾತರದಿಂದ ಕಾಯುತ್ತಿರುವ '83' ರಲ್ಲಿ ರಣ್ವೀರ್ ಸಿಂಗ್ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಆಲ್ ರೌಂಡರ್ ಕಪಿಲ್ ದೇವ್ ಅವರ ಪಾತ್ರದಲ್ಲಿ ಯಥಾವತ್ ಆಗಿ ಕಾಣುತ್ತಿದ್ದು, ಸೋಲುವ ಸಾಧ್ಯತೆಯೇ ಹೆಚ್ಚಿದ್ದ ತಂಡದ ಗೆಲುವಿನ ಸಾಮರ್ಥ್ಯವನ್ನು ಪ್ರತಿ ಹಂತದಲ್ಲೂ ಹೇಗೆ ಪ್ರಶ್ನಿಸಲಾಗುತ್ತದೆ ಹಾಗೂ ವಿಶ್ವ ಕ್ರಿಕೆಟ್ ನ ಉತ್ತುಂಗಕ್ಕೆ ಏರುವುದು ಹೇಗೆ ಸಾಧ್ಯವಾಯಿತು ಎಂಬುದರ ಕಥಾ ಹಂದರ ಹೊಂದಿರುವ ಸಿನಿಮಾ ಆಗಿದೆ. "83" ಸಿನಿಮಾ 4 ನಿಮಿಷಗಳ ಟ್ರೈಲರ್ ನ್ನು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com