ಸಚಿನ್ ಪುತ್ರಿ ಸಾರಾ ತೆಂಡೊಲ್ಕರ್ ಮಾಡೆಲಿಂಗ್ ಲೋಕಕ್ಕೆ ಪ್ರವೇಶ; ವಿಡಿಯೋ

ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೊಲ್ಕರ್ ಅವರ ಪುತ್ರಿ ಸಾರಾ ತೆಂಡೊಲ್ಕರ್ ಕೊನೆಗೂ ಮಾಡೆಲಿಂಗ್ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. 
ಸಚಿನ್ ಪುತ್ರಿ ಸಾರಾ ತೆಂಡೊಲ್ಕರ್
ಸಚಿನ್ ಪುತ್ರಿ ಸಾರಾ ತೆಂಡೊಲ್ಕರ್
Updated on

ಮುಂಬೈ:  ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೊಲ್ಕರ್ ಅವರ ಪುತ್ರಿ ಸಾರಾ ತೆಂಡೊಲ್ಕರ್ ಕೊನೆಗೂ ಮಾಡೆಲಿಂಗ್ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. 

ಈ ಬಗ್ಗೆ ಖುದ್ದು ಸಾರಾ ತೆಂಡೊಲ್ಕರ್ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪ್ರೋಮೋ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಡೆಲಿಂಗ್ ಲೋಕಕ್ಕೆ ಅಂಬೆಗಾಲಿಟ್ಟಿರುವ ಬಗ್ಗೆ ಹೇಳಿಕೊಂಡಿದ್ದಾರೆ. 

ಇವರ ವಸ್ತ್ರ ವಿನ್ಯಾಸದ ಪ್ರೋಮೋದಲ್ಲಿ ನಟಿ ಬನಿತಾ ಸಂಧು ಮತ್ತು ತಾನಿಯಾ ಶ್ರಫ್ ಕೂಡಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾರಾ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.  ಈ ಹಿಂದೆ ಕೂಡಾ  ಜಿಮ್ ಬಟ್ಟೆಯ ಜಾಹೀರಾತಿನಲ್ಲಿಯೂ ಸಾರಾ ತೆಂಡೊಲ್ಕರ್ ಕಾಣಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com