ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು ಬದಲಾವಣೆ ಮಾಡಿ: ಕಂಗನಾ ರಣಾವತ್ ಹೊಸ ವಿವಾದ

ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಂಡಿಯಾ ಎಂಬುದು ಬ್ರಿಟಿಷರ ನೀಡಿದ ಹೆಸರು ಇದನ್ನು ಬದಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Published: 23rd June 2021 01:25 PM  |   Last Updated: 23rd June 2021 01:38 PM   |  A+A-


kangana ranauat

ಕಂಗನಾ ರಣಾವತ್

Posted By : Shilpa D
Source : Online Desk

ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಂಡಿಯಾ ಎಂಬುದು ಬ್ರಿಟಿಷರ ನೀಡಿದ ಹೆಸರು ಇದನ್ನು ಬದಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುಲಾಮರು ಇಟ್ಟಿರುವ ಇಂಡಿಯಾ ಹೆಸರನ್ನು ಬದಲಾವಣೆ ಮಾಡಿ, ಭಾರತ್‌ ಎಂದು ಮರುನಾಮಕರಣ ಮಾಡಬೇಕು ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ  ಬರೆದುಕೊಂಡಿದ್ದಾರೆ.  ಕಂಗನಾ ತಮ್ಮ ಪೋಸ್ಟ್‌ನಲ್ಲಿ ‘ಭಾರತ್‌’ ಅರ್ಥದ  ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಭಾರತ್‌ ಎಂಬುದು ಮೂರು ಸಂಸ್ಕೃತ ಅಕ್ಷರಗಳಿಂದ ಕೂಡಿದ ಪದವಾಗಿದೆ. ಭಾ( ಭಾವ್‌), ರ(ರಾಗ್‌), ತ( ತಾಳ್) ಪದಗಳಿಂದ ಭಾರತ್‌ ಆಗಿದೆ. ಭಾವ, ರಾಗ, ತಾಳಗಳಿದ ಕೂಡಿರುವುದೇ ಭಾರತ (Bha -Bhav, Ra-Rag,Ta-Tal) ಎಂದು ಕಂಗನಾ ವಿವರಣೆ ನೀಡಿದ್ದಾರೆ.

ಯೋಗ, ಗೀತಾ, ವೇದಗಳಲ್ಲೂ ಭಾರತದ ಹೆಸರು ಪ್ರಸ್ತಾಪವಾಗಿದೆ. ಜಗತ್ತಿಗೆ ಹೊಸ ನಾಗರೀಕತೆಯನ್ನು ಕೊಟ್ಟ ಭಾರತೀಯರು, ಬ್ರಿಟಿಷರು ಇಟ್ಟ ಹೆಸರನ್ನು ತೆಗೆದು ಭಾರತ್‌ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
 

Kangana Ranautgi@kanganarofficial
India can only rise if it’s rooted in its ancient spirituality and wisdom, that is the soul of our great civilisation. World will look up to us and we will emerge as a world leader if we go higher in urban growth but not be cheap copy of western world and remain deeply rooted in Vedas, Geeta and Yoga, can we please change this slave name India back to Bharat ?

Stay up to date on all the latest ಬಾಲಿವುಡ್ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp