ನಟ ಸೋನು ಸೂದ್ ಮತ್ತು ಸಹಚರರಿಂದ 20 ಕೋಟಿ ರೂ. ಗೂ ಅಧಿಕ ತೆರಿಗೆ ವಂಚನೆ: ಆದಾಯ ತೆರಿಗೆ ಇಲಾಖೆ
ಬಾಲಿವುಡ್ ನಟ ಸೋನು ಸೂದ್ ಮತ್ತು ಅವರ ಸಹಚರರು ಸುಮಾರು 20 ಕೋಟಿಗೂ ಅಧಿಕ ತೆರಿಗೆ ವಂಚನೆ ಎಸಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ.
Published: 18th September 2021 01:07 PM | Last Updated: 18th September 2021 01:14 PM | A+A A-

ನಟ ಸೋನು ಸೂದ್(ಸಂಗ್ರಹ ಚಿತ್ರ)
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಮತ್ತು ಅವರ ಸಹಚರರು ಸುಮಾರು 20 ಕೋಟಿಗೂ ಅಧಿಕ ತೆರಿಗೆ ವಂಚನೆ ಎಸಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ.
ಮುಂಬೈಯಲ್ಲಿ ನಟ ಸೋನು ಸೂದ್ ಗೆ ಸೇರಿದ ಹಲವು ಸ್ಥಳಗಳು ಮತ್ತು ಲಕ್ನೊ ಮೂಲದ ಮೂಲಭೂತ ಸೌಕರ್ಯಗಳಲ್ಲಿ ತೊಡಗಿರುವ ಹಲವು ಕೈಗಾರಿಕೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ತಿಳಿಸಿದೆ.
ಇದುವರೆಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ನಟ ಮತ್ತು ಅವರ ಸಹಚರರು ಸುಮಾರು 20 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ ಎಂದು ಇಲಾಖೆ ಹೇಳಿದೆ.
ಇದುವರೆಗೆ ನಟನಿಗೆ ಸೇರಿದ ಮುಂಬೈ, ಲಕ್ನೊ, ಕಾನ್ಪುರ, ಜೈಪುರ, ದೆಹಲಿ ಮತ್ತು ಗುರುಗ್ರಾಮ್ ಗಳಲ್ಲಿರುವ ಒಟ್ಟು 28 ಕಚೇರಿಗಳು, ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಬುಧವಾರದಿಂದ ದಾಳಿ ನಡೆಸಿ ಶೋಧ ನಡೆಸಿದ್ದರು.
ಕಳೆದ ವರ್ಷ ಕೋವಿಡ್-19 ಲಾಕ್ ಡೌನ್ ಆದ ನಂತರ ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತಲುಪಲು ಸಹಾಯ ಮಾಡಿ ಮತ್ತು ಕಷ್ಟದಲ್ಲಿರುವವರಿಗೆ ನೆರವು ನೀಡಿ ರಾಷ್ಟ್ರಮಟ್ಟದಲ್ಲಿ 48 ವರ್ಷದ ನಟ ಸೋನು ಸೂದ್ ಸುದ್ದಿಯಾಗಿದ್ದರು.