ಲೇಡಿ ಸಿಂಗಂ ಆಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ; ನಿರ್ದೇಶಕ ರೋಹಿತ್ ಶೆಟ್ಟಿ ಘೋಷಣೆ

ನಟಿ ದೀಪಿಕಾ ಪಡುಕೋಣೆ ತಮ್ಮ ಕಾಪ್ ಯೂನಿವರ್ಸ್‌ಗಾಗಿ ಖಾಕಿ ಸಮವಸ್ತ್ರವನ್ನು ಧರಿಸಲಿದ್ದು, ಅವರು ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ನಿರ್ದೇಶಕ ರೋಹಿತ್ ಶೆಟ್ಟಿ ತಮ್ಮ ಮುಂಬರುವ ಚಿತ್ರ 'ಸರ್ಕಸ್' ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು.
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Updated on

ಮುಂಬೈ: ನಟಿ ದೀಪಿಕಾ ಪಡುಕೋಣೆ ತಮ್ಮ ಕಾಪ್ ಯೂನಿವರ್ಸ್‌ಗಾಗಿ ಖಾಕಿ ಸಮವಸ್ತ್ರವನ್ನು ಧರಿಸಲಿದ್ದು, ಅವರು ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ನಿರ್ದೇಶಕ ರೋಹಿತ್ ಶೆಟ್ಟಿ ತಮ್ಮ ಮುಂಬರುವ ಚಿತ್ರ 'ಸರ್ಕಸ್' ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು.

ರಣವೀರ್ ಸಿಂಗ್ ಮತ್ತು ದೀಪಿಕಾ ಜೊತೆಗೆ 'ಕರೆಂಟ್ ಲಗಾ ರೇ' ಸಿನಿಮಾದ ಹಾಡಿನ ಬಿಡುಗಡೆಗೆ ಬಂದಿದ್ದ ರೋಹಿತ್ ವೇದಿಕೆಯಲ್ಲಿ ಈ ವಿಚಾರ ತಿಳಿಸಿದರು.

'ಸಿಂಗಂ ಚಿತ್ರದ ಮುಂದಿನ ಭಾಗ ಯಾವಾಗ ಬರುತ್ತದೆ ಎಂದು ಜನರು ಕೇಳುತ್ತಲೇ ಇರುತ್ತಾರೆ (ಲೋಗ್ ಪೂಚ್ಟೆ ರೆಹತೆ ಹೈ ಸಿಂಗಮ್ ಕಾ ಅಗ್ಲಾ ಭಾಗ ಕಬ್ ಆಯೇಗಾ?). ಮುಂದಿನ ವರ್ಷ ನಾನು ಮತ್ತು ದೀಪಿಕಾ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳಲು ಇಂದು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ' ಎಂದರು.

ರೋಹಿತ್ ಮತ್ತು ದೀಪಿಕಾ ಈ ಹಿಂದೆ ಶಾರುಖ್ ಖಾನ್ ಅಭಿನಯದ 'ಚೆನ್ನೈ ಎಕ್ಸ್‌ಪ್ರೆಸ್' ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಸಿನಿಮಾ 2013 ರಲ್ಲಿ ಬಿಡುಗಡೆಯಾಯಿತು. ಅದಾದ ದಶಕದ ನಂತರ ದೀಪಿಕಾ ಮತ್ತು ರೋಹಿತ್ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com