ವಾಟ್ಸಾಪ್ ಮೂಲಕ ನಟಿ ಉರ್ಫಿ ಜಾವೇದ್‌ಗೆ ಅತ್ಯಾಚಾರ, ಕೊಲೆ ಬೆದರಿಕೆ; ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

ಕಿರುತೆರೆ ನಟಿ ಉರ್ಫಿ ಜಾವೇದ್‌ಗೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.
ಉರ್ಫಿ ಜಾವೇದ್ - ಆರೋಪಿ ನವೀನ್ ಗಿರಿ
ಉರ್ಫಿ ಜಾವೇದ್ - ಆರೋಪಿ ನವೀನ್ ಗಿರಿ

ಮುಂಬೈ: ಕಿರುತೆರೆ ನಟಿ ಉರ್ಫಿ ಜಾವೇದ್‌ಗೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.

ಗೋರೆಗಾಂವ್ ಪೊಲೀಸರು ನವೀನ್ ಗಿರಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಆತನ ವಿರುದ್ಧ 354 (ಎ) (ಲೈಂಗಿಕ ಕಿರುಕುಳ), 354 (ಡಿ) (ಹಿಂಬಾಲಿಸುವಿಕೆ), 509, 506 (ಕ್ರಿಮಿನಲ್ ಬೆದರಿಕೆ) ಐಪಿಸಿ ಮತ್ತು ಐಟಿ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ನವೀನ್ ವಾಟ್ಸ್‌ಆ್ಯಪ್ ಬಳಸಿ ಸಾಮಾಜಿಕ ಜಾಲತಾಣದ ಪ್ರಭಾವಿಗಳಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಚೇತನ್ ಭಗತ್, 'ಉರ್ಫಿ ಜಾವೇದ್ ಹೆಸರನ್ನು ಪ್ರಸ್ತಾಪಿಸುತ್ತಾ ಕೆಲವು ಹೇಳಿಕೆ ನೀಡಿದ್ದರು. ಈ ದಿನಗಳಲ್ಲಿ ಯುವಜನರು ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ವಿನಾ ಕಾರಣ ನಟಿಯರ ಫೋಟೋಗಳನ್ನು ನೋಡುತ್ತಾ ಲೈಕ್​​​ ಮಾಡುತ್ತ, ಕಮೆಂಟ್​​ ಮಾಡುತ್ತ ಅವರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಯುವಕರ ಪಡೆ ದೇಶವನ್ನು ಕಾಯುತ್ತಿದ್ದರೆ, ಇನ್ನೊಂದೆಡೆ ಉರ್ಫಿ ಜಾವೇದ್ ಅವರ ಫೋಟೋ ಮತ್ತು ರೀಲ್ಸ್​​ಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಉರ್ಫಿ ಜಾವೇದ್ ಯಾರೆಂದು ಎಲ್ಲರಿಗೂ ಗೊತ್ತು. ಆದರೂ ಅವರ ಫೋಟೋಗಳನ್ನು ನೋಡುತ್ತಾರೆ' ಎಂದಿದ್ದರು.

ಒಂದು ಕಡೆ, ಕಾರ್ಗಿಲ್‌ನಲ್ಲಿ ನಮ್ಮ ದೇಶವನ್ನು ರಕ್ಷಿಸುವ ಯುವಕನಿದ್ದರೆ, ಇನ್ನೊಂದು ಕಡೆ, ಉರ್ಫಿ ಜಾವೇದ್ ಅವರ ಫೋಟೋಗಳನ್ನು ತಮ್ಮ ಕಂಬಳಿಯೊಳಗೆ ಅಡಗಿಕೊಂಡು ನೋಡುತ್ತಿರುವ ಇನ್ನೊಬ್ಬ ಯುವಕ ನಮ್ಮಲ್ಲಿದ್ದಾನೆ' ಎಂದು ಅವರು ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಉರ್ಫಿ ಜಾವೇದ್, ಚೇತನ್ ಭಗತ್ ವಿರುದ್ಧ ಕಿಡಿಕಾರಿದ್ದರು.

'ಅವರಂತಹ ಪುರುಷರು ಯಾವಾಗಲೂ ತಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಮಹಿಳೆಯರನ್ನು ದೂಷಿಸುತ್ತಾರೆ. ಅತ್ಯಾಚಾರ ಸಂಸ್ಕೃತಿಯನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ, ಪುರುಷರ ವರ್ತನೆಗೆ ಮಹಿಳೆಯರ ಬಟ್ಟೆಗಳನ್ನು ದೂಷಿಸುವುದು 80ರ ದಶಕದ ಚೇತನ್ ಭಗತ್ ಅವರ ಕೆಲಸ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಹೆಚ್ಚುವರಿಯಾಗಿ, ಅವರು 2018ರಲ್ಲಿ ನಡೆದ ಮೀಟೂ ಅಭಿಯಾನದ ಚೇತನ್ ಭಗತ್ ಅವರ ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಹಂಚಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com