ಪ್ರಭಾಸ್-ಕೃತಿ ಸನೂನ್ ಸಂಬಂಧ ಬಗ್ಗೆ ನಟ ವರುಣ್ ಧವನ್ ಹೇಳಿದ್ದೇನು?: ನಾಚಿ ನೀರಾದ ನಟಿ, ವಿಡಿಯೋ ವೈರಲ್!

ನಟ ವರುಣ್ ಧವನ್ ಮತ್ತು ನಟಿ ಕೃತಿ ಸನೂನ್ ತೆರೆಯ ಮೇಲೆ ಮತ್ತು ಹೊರಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಪರಸ್ಪರರ ಕಾಲು ಎಳೆಯುವುದು, ಮೋಜು ಮಾಡುವುದು ಸಾಮಾನ್ಯ. ಇತ್ತೀಚಿನ ಬಿಡುಗಡೆಯ ಚಿತ್ರ 'ಭೇಡಿಯಾ' ಪ್ರಚಾರದಲ್ಲಿ ಇಬ್ಬರು ನಿರತರಾಗಿದ್ದಾರೆ.
ವರುಣ್ ಧವನ್-ಕೃತಿ ಸನೂನ್-ಪ್ರಭಾಸ್
ವರುಣ್ ಧವನ್-ಕೃತಿ ಸನೂನ್-ಪ್ರಭಾಸ್
Updated on

ಮುಂಬೈ: ನಟ ವರುಣ್ ಧವನ್ ಮತ್ತು ನಟಿ ಕೃತಿ ಸನೂನ್ ತೆರೆಯ ಮೇಲೆ ಮತ್ತು ಹೊರಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಪರಸ್ಪರರ ಕಾಲು ಎಳೆಯುವುದು, ಮೋಜು ಮಾಡುವುದು ಸಾಮಾನ್ಯ. ಇತ್ತೀಚಿನ ಬಿಡುಗಡೆಯ ಚಿತ್ರ 'ಭೇಡಿಯಾ' ಪ್ರಚಾರದಲ್ಲಿ ಇಬ್ಬರು ನಿರತರಾಗಿದ್ದಾರೆ.

ಈ ವೇಳೆ ವರುಣ್ ಆಕಸ್ಮಿಕವಾಗಿ ಕೃತಿ ಸನೂನ್ ಅವರ ಪ್ರೇಮ ಜೀವನದ ಬಗ್ಗೆ ಬಹಿರಂಗಪಡಿಸಿದ್ದಾರೆ. ರಿಯಾಲಿಟಿ ಶೋ ಸೆಟ್‌ನಲ್ಲಿ ಕೃತಿ ಮತ್ತು ಪ್ರಭಾಸ್ ಅವರ ಪ್ರಣಯವನ್ನು ವರುಣ್ ಖಚಿತಪಡಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ವಾಸ್ತವವಾಗಿ, ಸೆಲೆಬ್ರಿಟಿ ಡ್ಯಾನ್ಸ್ ರಿಯಾಲಿಟಿ ಶೋ 'ಜಲಕ್ ದಿಖ್ಲಾ ಜಾ 10'ರ ಅಂತಿಮ ಸಂಚಿಕೆಯಲ್ಲಿ ವರುಣ್ ಧವನ್ ಮತ್ತು ಕೃತಿ ಸನೋನ್ ಅತಿಥಿಗಳಾಗಿ ಆಗಮಿಸಿದ್ದರು. ಈ ಸಮಯದಲ್ಲಿ, ವರುಣ್ ಧವನ್ ಕಾರ್ಯಕ್ರಮದ ತೀರ್ಪುಗಾರ ಮತ್ತು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರನ್ನು ಪ್ರಶ್ನಿಸಿದರು. ಮಾಧುರಿ ಮಾಮ್ ಹೊರತುಪಡಿಸಿ, ಕಾಜೋಲ್, ರಾಣಿ, ಕರೀನಾ, ಆಲಿಯಾ ಮತ್ತು ದೀಪಿಕಾ ಆಗಿರಲಿ. ಅಷ್ಟು ಸುಂದರಿಯರ ಪಟ್ಟಿಯಲ್ಲಿ ಕೃತಿ ಹೆಸರನ್ನು ಏಕೆ ಉಲ್ಲೇಖಿಸಿಲ್ಲ ಎಂದು ಕರಣ್ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ವರುಣ್, ಕೃತಿಯ ಹೆಸರು ಯಾಕಿಲ್ಲ ಅಂದರೆ 'ಕಿಸಿ ಕಿ ದಿಲ್ ಮೇ ಹೈ'(ಅವರು ಮತ್ತೊಬ್ಬರ ಹೃದಯದಲ್ಲಿದ್ದಾರೆ) ಎಂದು ಹೇಳುತ್ತಾನೆ. ಇದಕ್ಕೆ ಕರಣ್ ಆ ನಟ ಹೆಸರೇಳುವಂತೆ ಕೇಳಿದ್ದಕ್ಕೆ ವರುಣ್, ಮುಂಬೈನಲ್ಲಿ ಇಲ್ಲದ ಒಬ್ಬ ವ್ಯಕ್ತಿ ಇದ್ದಾರೆ. ಅವರು ಪ್ರಸ್ತುತ ದೀಪಿಕಾ(ದೀಪಿಕಾ ಪಡುಕೋಣೆ) ಜೊತೆ ಶೂಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಸದ್ಯ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಅವರನ್ನು ಉದ್ದೇಶಿಸಿ ಹೇಳಿರುವುದಂತ ಸ್ಪಷ್ಟವಾಯಿತು. ಇದಕ್ಕೆ ಕೃತಿ ಸಹ ನಾಚಿಕೆಪಡುತ್ತಾಳೆ. 

ಕೃತಿ ಸನೂನ್ ಮತ್ತು ಪ್ರಭಾಸ್ ಆದಿಪುರುಷ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇನ್ನು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಇತ್ತೀಚೆಗೆ, ಕೃತಿ ಸನೂನ್ ಅವರು ಸಂದರ್ಶನವೊಂದರಲ್ಲಿ ತನಗೆ ಅವಕಾಶ ಸಿಕ್ಕರೆ, ಪ್ರಭಾಸ್ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com