ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಬಹಿಷ್ಕರಿಸಿ ರಾಷ್ಟ್ರೀಯವಾದಿಗಳಿಂದ ಅಭಿಯಾನ!

ಅಸಹಿಷ್ಣುತೆ ಹೇಳಿಕೆ ಸೇರಿದಂತೆ ಹಲವು ತಮ್ಮ ಹಿಂದಿನ ಹೇಳಿಕೆಗಳು ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಗೆ ಸಂಕಷ್ಟ ತಂದಿಟ್ಟಿದೆ. ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿರುವ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸುವಂತೆ ರಾಷ್ಟ್ರೀಯವಾದಿಗಳಿಂದ ಅಭಿಮಾನ ಮತ್ತಷ್ಟು ತೀವ್ರಗೊಂಡಿದೆ.
ಅಮೀರ್ ಖಾನ್
ಅಮೀರ್ ಖಾನ್

ನವದೆಹಲಿ: ಅಸಹಿಷ್ಣುತೆ ಹೇಳಿಕೆ ಸೇರಿದಂತೆ ಹಲವು ತಮ್ಮ ಹಿಂದಿನ ಹೇಳಿಕೆಗಳು ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಗೆ ಸಂಕಷ್ಟ ತಂದಿಟ್ಟಿದೆ. ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿರುವ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸುವಂತೆ ರಾಷ್ಟ್ರೀಯವಾದಿಗಳಿಂದ ಅಭಿಮಾನ ಮತ್ತಷ್ಟು ತೀವ್ರಗೊಂಡಿದೆ.

ಬಾಲಿವುಡ್ ನಟ ವಿಶೇಷವಾಗಿ ಅಮೀರ್ ಖಾನ್ ಅವರಂತಹ ಅಲ್ಪಸಂಖ್ಯಾತ ಮುಸ್ಲಿಮರು ಹಿಂದೂ ರಾಷ್ಟ್ರವಾದಿ ಪ್ರಧಾನಿ ಮೋದಿಯವರ ಅಡಿಯಲ್ಲಿ ಹೇಗೆ ಒತ್ತಡವನ್ನು ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಇದು ಇತ್ತೀಚಿನ ಉದಾಹರಣೆಯಾಗಿದೆ.

1994ರ ಟಾಮ್ ಹ್ಯಾಂಕ್ಸ್ ಅಭಿನಯದ ಹಾಲಿವುಡ್ ಸೂಪರ್ ಹಿಟ್ ಚಿತ್ರ ಫಾರೆಸ್ಟ್ ಗಂಪ್ ಹಿಂದಿ ರಿಮೇಕ್ 'ಲಾಲ್ ಸಿಂಗ್ ಚಡ್ಡಾ' ಆಗಿದ್ದು ಇದು 2022ರ ಭಾರತದ ಅತಿದೊಡ್ಡ ಬಾಕ್ಸ್ ಆಫೀಸ್ ಸಿನಿಮಾಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ.

2009ರ 3 ಈಡಿಯಟ್ಸ್ ಮತ್ತು 2016ರ ದಂಗಲ್ ನಂತಹ ಬ್ಲಾಕ್‌ಬಸ್ಟರ್‌ ಚಿತ್ರಗಳ ನಾಯಕ 57 ವರ್ಷದ ಅಮೀರ್ ಖಾನ್ ಮಿಸ್ಟರ್ ಫರ್ಫೆಕ್ಟ್ ಎಂದು ಖ್ಯಾತರಾಗಿದ್ದಾರೆ. 

ಇನ್ನು ಆಗಸ್ಟ್ 11ರಂದು ಚಿತ್ರ ಬಿಡುಗಡೆಯಾಗುತ್ತಿದ್ದು ಅದಕ್ಕೂ ಮುನ್ನ 2015ರ ಅಮೀರ್ ಖಾನ್ ಸಂದರ್ಶನದ ಕ್ಲಿಪ್‌ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದು ಖಾನ್ ಅಸಹಿಷ್ಟುತೆ ಪದ ಬಳಸಿದ್ದರು. ಅಲ್ಲದೆ ಅವರ ಪತ್ನಿ ಕಿರಣ್ ರಾವ್  ಭಾರತವನ್ನು ತೊರೆಯುವ ಬಗ್ಗೆ ಮಾತನಾಡಿದ್ದರು. 

#BoycottLaalSinghChaddha ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಚಿತ್ರವನ್ನು ಬಹಿಷ್ಟರಿಸುವಂತೆ ಜನರಿಗೆ ಕರೆ ನೀಡಲಾಗುತ್ತಿದೆ. ಅಲ್ಲದೆ 200,000ಕ್ಕೂ ಹೆಚ್ಚು ಟ್ವೀಟ್‌ಗಳು ಹಂಚಿಕೊಳ್ಳಲಾಗಿದ್ದು ಇದರಲ್ಲಿ ಅತೀ ಹೆಚ್ಚು ಟ್ವೀಟ್ ಗಳು ಮೋದಿಯ ಬಿಜೆಪಿ ಪಕ್ಷದ ಬೆಂಬಲಿಗರಿಂದ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com