ಕೆಜಿಎಫ್ 2 ಜೊತೆಗೇ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆ ಮಾಡದೆ ಬದುಕಿದೆವು: ರಾಕಿ ಭಾಯ್ ಖದರ್ ಗೆ ಬೆಚ್ಚಿದ್ದ ಅಮೀರ್ ಖಾನ್!

ಲಾಲ್ ಸಿಂಗ್ ಚಡ್ಡಾ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿರುವ ಬಾಲಿವುಡ್ ನಟ ಅಮೀರ್ ಖಾನ್,  'ಕೆಜಿಎಫ್ 2 ವಿರುದ್ಧ ಬಾರದೇ ನಾವು ಬದುಕಿದೆವು' ಎಂದು ಹೇಳಿದ್ದಾರೆ.
ಅಮೀರ್ ಖಾನ್ ಮತ್ತು ಕೆಜಿಎಫ್ 2
ಅಮೀರ್ ಖಾನ್ ಮತ್ತು ಕೆಜಿಎಫ್ 2

ಮುಂಬೈ: ಲಾಲ್ ಸಿಂಗ್ ಚಡ್ಡಾ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿರುವ ಬಾಲಿವುಡ್ ನಟ ಅಮೀರ್ ಖಾನ್,  'ಕೆಜಿಎಫ್ 2 ವಿರುದ್ಧ ಬಾರದೇ ನಾವು ಬದುಕಿದೆವು' ಎಂದು ಹೇಳಿದ್ದಾರೆ.

ಚಿತ್ರದ ಮೇಕಿಂಗ್ ವಿಳಂಬ 'ಕೆಜಿಎಫ್: ಚಾಪ್ಟರ್ 2 ಜೊತೆಗಿನ ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿತು. ಒಂದು ಅರ್ಥದಲ್ಲಿ ಇದು ನಮ್ಮ ಅಧೃಷ್ಟವೇ ಸರಿ.. ಅಂದು ಕೆಜಿಎಫ್ 2 ಚಿತ್ರದ ವಿರುದ್ಧ ತಮ್ಮ ಚಿತ್ರ ಪೈಪೋಟಿಗೆ ನಿಲ್ಲಲಿಲ್ಲ ಎಂದು ಹೇಳಿದ್ದಾರೆ.

ರಾಕಿ ಭಾಯ್ ಖದರ್ ಗೆ ಬೆಚ್ಚಿದ್ದ ಅಮೀರ್ ಖಾನ್!
ಕೆಜಿಎಫ್ 2  ಸಿನಿಮಾ ನಂತ್ರ ರಾಕಿಂಗ್ ಸ್ಟಾರ್ ಯಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಬಂದು ನಿಂತಿದ್ದಾರೆ ಎಂದರೂ ತಪ್ಪಾಗಲಾರದು. ಕನ್ನಡದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಸಿನಿಮಾ ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗವೇ (Indian Film Industry) ಒಮ್ಮೆ ತಿರುಗಿ ನೋಡಿದೆ. ಅಲ್ಲದೇ ಬಾಲಿವುಡ್‌ ದಾಖಲೆಗಳನ್ನು (Bollywood Records) ‘ರಾಕಿ ಭಾಯ್’ ಅಳಿಸಿಹಾಕಿದ್ದಾನೆ. ಇಡೀ ವಿಶ್ವದಲ್ಲೇ ರಾಕಿಂಗ್​ ಸ್ಟಾರ್​ ಯಶ್ (Rocking Star Yash)​ ಹೆಸರು ಫೇಮಸ್​ ಆಗಿದೆ. ಇದರ ನಡುವೆ ಹಿಂದಿಯ ಸ್ಟಾರ್​ ಹೀರೋ ಅಮೀರ್ ಖಾನ್ ಅವರ ಬಹಿನಿರೀಕ್ಷಿತ ಲಾಲ್​ ಸಿಂಗ್​ ಚಡ್ಡಾ  ಸಿನಿಮಾ ಸಹ ಕೆಜಿಎಫ್ 2 ಜೊತೆ ತೆರೆ ಕಾಣುವುದಾಗಿ ಘೋಷಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅದನ್ನು ಮುಂದೂಡಿತು. ಇದಕ್ಕೆ ಕೆಜಿಎಫ್ 2 ಚಿತ್ರದ ಭಯವೇ ಕಾರಣ ಎಂದು ಇದೀಗ ಸ್ವತಃ ಅಮೀರ್ ಒಪ್ಪಿಕೊಂಡಿದ್ದಾರೆ.

ಹೌದು, ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಕೆಜಿಎಫ್ 2 ಚಿತ್ರದ ಜೊತೆ ತೆರೆಕಾಣಬೇಕಿತ್ತು. 1994ರಲ್ಲಿ ಬಂದ ‘ಫಾರೆಸ್ಟ್ ಗಂಪ್​’ ಚಿತ್ರದ ರಿಮೇಕ್ ‘ಲಾಲ್ ಸಿಂಗ್​ ಚಡ್ಡಾ’. ಆದರೆ, ಅಂತಿಮ ಕ್ಷಣದಲ್ಲಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬ ಎಂಬ ಕಾರಣ ನೀಡಿ ಸಿನಿಮಾವನ್ನು ಆಗಸ್ಟ್ 11ಕ್ಕೆ ಮುಂದೂಡಿತು. 

ಪೈಪೋಟಿಗಿಳಿಯದೇ ನಾವು ಬದುಕಿದೆವು
ಅಮಿರ್ ಖಾನ್ ಈ ಕುರಿತು ಮಾತನಾಡಿದ್ದು, ‘ಕೆಜಿಎಫ್ 2 ಸಿನಿಮಾದ ಕುರಿತು ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಕೇವಲ ಪ್ರೇಕ್ಷಕರಲ್ಲದೇ ನನ್ನ ಗೆಳೆಯರ ಬಳಗದವರು ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಲಾಲ್ ಸಿಂಗ್ ಚಡ್ಡಾ ಏಪ್ರಿಲ್ 14ರಂದು ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ವಿಎಫ್​ಎಕ್ಸ್​ ಕೆಲಸ ವಿಳಂಬ ಮಾಡಿದರು. ಅದು ನಮ್ಮ ಅದೃಷ್ಟ. ನಾವು ಬದುಕಿದೆವು. ಇಲ್ಲವಾದರೆ ನಾವು ಕೆಜಿಎಫ್ 2 ಎದುರು ಸ್ಪರ್ಧಿಸಬೇಕಿತ್ತು’ ಎಂದು ಆಮಿರ್ ಖಾನ್ ಹೇಳಿದ್ದಾರೆ. ಈ ಮೂಲಕ ಬಾಲಿವುಡ್​ನ ಮಿಸ್ಟರ್​ ಫರ್ಫೆಕ್ಟ್ ಸಹ ಹೆದರಿದ್ದಾಗಿ ಮತ್ತೊಮ್ಮೆ ಸಾಭೀತಾಗಿದೆ.​

"ಕೆಜಿಎಫ್ 2' ಬಿಡುಗಡೆಗೆ ಬಂದಾಗ, ಹಿಂದಿ ಪ್ರೇಕ್ಷಕರಲ್ಲಿ, ನನ್ನ ಸ್ವಂತ ಸ್ನೇಹಿತರಲ್ಲಿ ಸಾಕಷ್ಟು ಉತ್ಸಾಹವಿತ್ತು ಎಂದು ನನಗೆ ನೆನಪಿದೆ. "'ಲಾಲ್ ಸಿಂಗ್ ಚಡ್ಡಾ' ಆ ದಿನ ಬಿಡುಗಡೆಯಾಗಬೇಕಿತ್ತು. ಆದರೆ ಅದೃಷ್ಟವಶಾತ್ ನಮಗೆ, ರೆಡ್ ಚಿಲ್ಲಿಸ್ VFX ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿತ್ತು. ಆದ್ದರಿಂದ ನಮಗೆ ರಕ್ಷಣೆ ದೊರೆಯಿತು. ಇಲ್ಲದಿದ್ದರೆ, ನಾವು 'ಕೆಜಿಎಫ್ 2' ನೊಂದಿಗೆ ಬಿಡುಗಡೆಗೆ ಬರುತ್ತಿದ್ದೆವು ಎಂದು ಹೇಳಿದ್ದಾರೆ.

ಇದೇ ವೇಳೆ ದಕ್ಷಿಣ ಭಾರತದ ಚಿತ್ರಗಳನ್ನು ಹೊಗಳಿರುವ ಅಮೀರ್ ಖಾನ್, ಭಾರತದ ಒಂದು ರಾಜ್ಯದಿಂದ ಹೊರಬರುವ ಚಲನಚಿತ್ರವು ಇಡೀ ದೇಶಕ್ಕೆ ಯಶಸ್ವಿಯಾಗಿ ಸಂತೋಷ ಮತ್ತು ಮನರಂಜನೆಯನ್ನು ನೀಡುತ್ತದೆ ಎಂದು ನೋಡುವುದು ಅದ್ಭುತವಾಗಿದೆ. ಅದು ಸಂಭವಿಸಿದಾಗ ಅದು ನಮಗೆ ನಿಜವಾಗಿಯೂ ಸಂಭ್ರಮಾಚರಣೆಯಾಗಿರುತ್ತದೆ.  ಪುಷ್ಪ: ದಿ ರೈಸ್", ಎಸ್ ಎಸ್ ರಾಜಮೌಳಿ ಅವರ "ಆರ್ಆರ್ಆರ್" ನಿಂದ "ಕೆಜಿಎಫ್: ಅಧ್ಯಾಯ 2" ವರೆಗೆ, ದಕ್ಷಿಣ ಚಲನಚಿತ್ರಗಳ ಪ್ಯಾನ್-ಇಂಡಿಯಾ ಯಶಸ್ಸನ್ನು ನೋಡಲು ಇದು ಹೃದಯವಂತವಾಗಿದೆ. "'ಕೆಜಿಎಫ್ 2' ಕನ್ನಡ ಚಿತ್ರ, 'ಪುಷ್ಪ', 'ಬಾಹುಬಲಿ', 'ಆರ್‌ಆರ್‌ಆರ್' (ಎಲ್ಲಾ ತೆಲುಗು) ಇದೆ. ಈ ಎಲ್ಲಾ ಚಿತ್ರಗಳು ದಕ್ಷಿಣ ಭಾರತದಿಂದ ಬಂದಿವೆ ಮತ್ತು ದೇಶಾದ್ಯಂತ ಪ್ರೇಕ್ಷಕರ ಹೃದಯವನ್ನು ಗೆದ್ದಿವೆ ಎಂದು ಅವರು ಹೇಳಿದರು.

ಕೆಜಿಎಫ್ ಎದುರು ಮಕಾಡೆ ಮಲಗಿದ್ದ ಸಾಲು-ಸಾಲು ಬಾಲಿವುಡ್ ಚಿತ್ರಗಳು
ಇನ್ನು ಕನ್ನಡದ ಕೆಜಿಎಫ್ 1 ಚಿತ್ರದ ಅಬ್ಬರಕ್ಕೆ ಬಾಲಿವುಡ್ ನ ಸಾಲು ಸಾಲು ಚಿತ್ರಗಳ ಮಕಾಡೆ ಮಲಗಿದ್ದವು. ತಮಿಳು ನಟ ಧನುಷ್ ಅಭಿನಯದ ಮಾರಿ-2, ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರಗಳು ಸೋತಿದ್ದವು. ಅಂತೆಯೇ ಕೆಜಿಎಫ್ 2 ಬಿಡುಗಡೆ ಸಂದರ್ಭದಲ್ಲೂ ತಮಿಳು ನಟ ವಿಜಯ್ ರ ಬೀಸ್ಚ್, ಜಾನ್ ಅಬ್ರಹಂರ ಚಿತ್ರಗಳು ಬಿಡುಗಡೆಯಾಗಿ ಸೋತಿದ್ದವು. ಇದರ ಜೊತೆಗೆ ರಾಕಿ ಭಾಯ್​ಗೆ ಹೆದರಿ ಅಮೀರ್ ಖಾನ್ ಚಿತ್ರ ಬಿಡುಗಡೆಯಿಂದ ಹಿಂದೆ ಸರಿದ್ದಿದ್ದರು. ಇದನ್ನು ಸ್ವತಃ ಇದೀಗ ಅವರೇ ಒಪ್ಪಿಕೊಂಡಿದ್ದಾರೆ.

1994 ರ ಟಾಮ್ ಹ್ಯಾಂಕ್ಸ್ ಅಭಿನಯದ "ಫಾರೆಸ್ಟ್ ಗಂಪ್" ನ ಹಿಂದಿ ರೂಪಾಂತರ "ಲಾಲ್ ಸಿಂಗ್ ಚಡ್ಡಾ" ಚಿತ್ರಕ್ಕೆ ಅದ್ವೈತ್ ಚಂದನ್ ನಿರ್ದೇಶನವಿದ್ದು, ಅಮೀರ್ ಖಾನ್ ಜೊತೆಗೆ ಕರೀನಾ ಕಪೂರ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲಾಲ್ ಸಿಂಗ್ ಚಡ್ಡಾ" ಆಗಸ್ಟ್ 11 ರಂದು ಬಿಡುಗಡೆಯಾಗಲಿದ್ದು ಈ ಚಿತ್ರವು ಅಕ್ಷಯ್ ಕುಮಾರ್ ಅವರ "ರಕ್ಷಾ ಬಂಧನ" ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಪೈಪೋಟಿಗಿಳಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com