ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ಲಾಲ್ ಸಿಂಗ್ ಚಡ್ಡಾ, ರಕ್ಷಾ ಬಂಧನ್!
ಸಾಲು ಸಾಲು ರಜೆಗಳ ಹೊರತಾಗಿಯೂ ಬಾಲಿವುಡ್ ನ ಲಾಲ್ ಸಿಂಗ್ ಚಡ್ಡಾ, ರಕ್ಷಾ ಬಂಧನ್ ಚಿತ್ರಗಳು ಬಾಕ್ಸ್ ಆಫೀಸ್ ನಿರೀಕ್ಷೆ ಹುಸಿಗೊಳಿಸಿದ್ದು, ಮಕಾಡೆ ಮಲಗಿವೆ. ಬಾಲಿವುಡ್ ಬಾಕ್ಸ್ ಆಫೀಸ್ ಗೆ ಇದು ನಿಜಕ್ಕೂ ಆಘಾತದ ಸುದ್ದಿಯಾಗಿದೆ.
ಆಗಸ್ಟ್ 11 ಗುರುವಾರ ಬಿಡುಗಡೆಯಾದ ಈ ಚಿತ್ರಗಳಿಗೆ ಸ್ವಾತಂತ್ರೋತ್ಸವ ಸೇರಿದಂತೆ ಐದು ದಿನಗಳ ವಿಸ್ತರಿತ ವಾರಾಂತ್ಯವಿದ್ದರೂ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಸೋತಿವೆ. ವಾಸ್ತವವಾಗಿ ಎರಡು ಸಿನಿಮಾಗಳಲ್ಲಿ ಯಾವುದು ಮೊದಲು 100 ಕೋಟಿ ಕೋಟಿಯನ್ನು ಎಷ್ಟು ಬೇಗ ಗಳಿಸುತ್ತದೆ ಎಂದು ಬಾಜಿ ಕಟ್ಟಲಾಗುತ್ತಿತ್ತು.
ನಾಲ್ಕು ವರ್ಷಗಳ ನಂತರ ತೆರೆ ಕಂಡ ಅಮಿರ್ ಖಾನ್ ಅವರ ಲಾಲ್ ಸಿಂಗ್ ಅವರ ಸಿನಿಮಾದಲ್ಲಿ ಕರೀನಾ ಕಪೂರ್ ಅಭಿನಯ ಹಾಗೂ ಹಾಲಿವುಡ್ ನ ಫಾರೆಸ್ಟ್ ಗಂಪ್ ಟ್ರಂಪ್ ಕಾರ್ಡ್ ನೊಂದಿಗೆ ಬಾಕ್ಸ್ ಆಫೀಸ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ಆದಾಗ್ಯೂ, ಈ ಚಿತ್ರ 100 ಕೋಟಿ ಕಲೆಕ್ಷನ್ ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಓಪನಿಂಗ್ ಡೇ ನಲ್ಲಿ ಕೇವಲ 11. 70 ಕೋಟಿ ಸಂಗ್ರಹಿಸಿದ ಲಾಲ್ ಸಿಂಗ್ ಚಡ್ಡಾ, ಭಾನುವಾರದವರೆಗೂ ಕೇವಲ ರೂ. 117 ಮಿಲಿಯನ್ ನಷ್ಟು ಕಲೆಕ್ಷನ್ ಮಾಡಿದೆ. ಶುಕ್ರವಾರ ರೂ. 7.26 ಕೋಟಿ, ಶನಿವಾರ ರೂ. 9 ಕೋಟಿ ಮತ್ತು ಭಾನುವಾರ ರೂ. 10 ಕೋಟಿ ಕಲೆಕ್ಷನ್ ಆಗಿದೆ. ಸೋಮವಾರದವರೆಗೂ ಕೇವಲ 37. 96 ಕೋಟಿ ( 379. 6 ಮಿಲಿಯನ್ ) ಕಲೆಕ್ಷನ್ ಮಾಡಿದೆ.
ರಕ್ಷಾ ಬಂಧನ್ ಕೂಡಾ ಚಿತ್ರ ಕೂಡಾ ಈವರೆಗೂ ಕೇವಲ 28. 16 ಕೋಟಿ ಮಾತ್ರ ಕಲೆಕ್ಷನ್ ಆಗಿದೆ. ಗುರುವಾರ ಕೇವಲ 8. 20 ಕೋಟಿ ಕಲೆಕ್ಷನ್ ಮಾಡಿದ್ದ ಈ ಚಿತ್ರ ಶುಕ್ರವಾರ 6.40 ಕೋಟಿ, ಶನಿವಾರ 6.51 ಕೋಟಿ, ಭಾನುವಾರ ರೂ. 7.05 ಕೋಟಿ ಗಳಿಸಿದೆ. ಆದರೆ, ಈ ಎರಡೂ ಚಿತ್ರಗಳು 100 ಕೋಟಿ ಕಲೆಕ್ಷನ್ ಮಾಡುವುದು ಅಸಂಭವವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ