ಸ್ವಿಡ್ಜರ್‌ಲೆಂಡ್ ಅಂತರರಾಷ್ಟ್ರೀಯ ಚಿತ್ರೋತ್ಸವದ 'ಅಧಿಕೃತ ಆಯ್ಕೆ' ವಿಭಾಗಕ್ಕೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಆಯ್ಕೆ

ಮಾರ್ಚ್‌ನಲ್ಲಿ ಬಿಡುಗಡೆಯಾದ ಸುಮಾರು ಒಂದು ವರ್ಷದಿಂದಲೂ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಗಲ್ಲಾಪೆಟ್ಟಿಗೆಯನ್ನು ಮೀರಿ ಒಂದಿಲ್ಲೊಂದು ಕಾಣಗಳಿಗಾಗಿ ಸುದ್ದಿ ಮಾಡುತ್ತಲೇ ಇದೆ.
ದಿ ಕಾಶ್ಮೀರ್ ಫೈಲ್ಸ್ ಸ್ಟಿಲ್
ದಿ ಕಾಶ್ಮೀರ್ ಫೈಲ್ಸ್ ಸ್ಟಿಲ್

ಮುಂಬೈ: ಮಾರ್ಚ್‌ನಲ್ಲಿ ಬಿಡುಗಡೆಯಾದ ಸುಮಾರು ಒಂದು ವರ್ಷದಿಂದಲೂ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಗಲ್ಲಾಪೆಟ್ಟಿಗೆಯನ್ನು ಮೀರಿ ಒಂದಿಲ್ಲೊಂದು ಕಾಣಗಳಿಗಾಗಿ ಸುದ್ದಿ ಮಾಡುತ್ತಲೇ ಇದೆ.

ಇತ್ತೀಚೆಗೆ ಗೋವಾದಲ್ಲಿ ನಡೆದ ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ವಿವಾದದ ನಂತರ, ಚಲನಚಿತ್ರವು ಪ್ರತಿಷ್ಠಿತ ಸ್ವಿಡ್ಜರ್‌ಲೆಂಡ್ ಅಂತರರಾಷ್ಟ್ರೀಯ ಚಿತ್ರೋತ್ಸವದ 'ಅಧಿಕೃತ ಆಯ್ಕೆ' ವಿಭಾಗಕ್ಕೆ ಆಯ್ಕೆಯಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ವಿವೇಕ್ ಅಗ್ನಿಹೋತ್ರಿ, 'ಪ್ರತಿಷ್ಠಿತ ಸ್ವಿಡ್ಜರ್‌ಲೆಂಡ್ ಅಂತರರಾಷ್ಟ್ರೀಯ ಚಿತ್ರೋತ್ಸವದ 'ಅಧಿಕೃತ ಆಯ್ಕೆ' ವಿಭಾಗಕ್ಕೆ ದಿ ಕಾಶ್ಮೀರ ಫೈಲ್ಸ್ ಸಿನಿಮಾ ಆಯ್ಕೆಯಾಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ' ಎಂದಿದ್ದಾರೆ.

'ದಿ ಕಾಶ್ಮೀರ ಫೈಲ್ಸ್' ಸಿನಿಮಾವು 1990ರ ದಶಕದ ಸಮಯದಲ್ಲಿ ಕಾಶ್ಮೀರಿ ಪಂಡಿತರ ಸಮುದಾಯದ ನೋವು, ಸಂಕಟ ಮತ್ತು ಹೋರಾಟವನ್ನು ಸೆರೆಹಿಡಿಯುವ ಹೃದಯ ವಿದ್ರಾವಕ ಚಲನಚಿತ್ರವಾಗಿದೆ. ಕಾಶ್ಮೀರ ಮತ್ತು ಭಯೋತ್ಪಾದನೆಯ ಭೀತಿಯ ಬಗ್ಗೆ ಭಾರಿ ಚರ್ಚೆಯನ್ನು ಹುಟ್ಟುಹಾಕುವುದರ ಜೊತೆಗೆ, ಚಿತ್ರವು ವಿಶ್ವದಾದ್ಯಂತ 340.92 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

ನವೆಂಬರ್‌ನಲ್ಲಿ, ಐಎಫ್ಎಫ್ಐನಲ್ಲಿ ಜ್ಯೂರಿ ಮುಖ್ಯಸ್ಥ ಮತ್ತು ಇಸ್ರೇಲಿ ಸಿನಿಮಾ ನಿರ್ದೇಶದ ನಡಾವ್ ಲ್ಯಾಪಿಡ್ ಅವರು 'ದಿ ಕಾಶ್ಮೀರ್ ಫೈಲ್ಸ್' ಅನ್ನು 'ಪ್ರಚಾರ' ಮತ್ತು 'ಅಶ್ಲೀಲ' ಎಂದು ವಿವರಿಸಿದ್ದು, ವಿವಾದಕ್ಕೆ ಕಾಣವಾಗಿತ್ತು.

ಈ ಮಧ್ಯೆ, ವಿವೇಕ್ ಅಗ್ನಿಹೋತ್ರಿ ಮತ್ತು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ಮಾಪಕಿ ಹಾಗೂ ನಟಿ ಪಲ್ಲವಿ ಜೋಶಿ, ತಮ್ಮ ಮುಂಬರುವ ಚಿತ್ರ 'ದಿ ವ್ಯಾಕ್ಸಿನ್ ವಾರ್' ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ಇದು ಕೋವಿಡ್-19 ವಿರುದ್ಧ ಸ್ಥಳೀಯ ಲಸಿಕೆ ಅಭಿವೃದ್ಧಿಪಡಿಸುವ ಭಾರತದ ಓಟದ ಕಥೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com