ಐಟಿಎ ಅವಾರ್ಡ್ 2022: ವರುಣ್ ಧವನ್ ಗೆ ದಶಕದ ನಟ, ಕಾಶ್ಮೀರ ಫೈಲ್ಸ್ ಗೆ ಗೋಲ್ಡನ್ ಲಾರೆಲ್ ಪ್ರಶಸ್ತಿ

ಐಟಿಎ ಅವಾರ್ಡ್ಸ್ 22 ನೇ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಸಕ್ತ ವರ್ಷದಲ್ಲಿ ವರುಣ್ ಧವನ್ ಗೆ ದಶಕದ ನಟ, ಕಾಶ್ಮೀರ ಫೈಲ್ಸ್ ಗೆ ಗೋಲ್ಡನ್ ಲಾರೆಲ್ ಪ್ರಶಸ್ತಿ ಒಲಿದಿದೆ.
22 ನೇ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ
22 ನೇ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ

ಮುಂಬೈ: ಐಟಿಎ ಅವಾರ್ಡ್ಸ್ 22 ನೇ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಸಕ್ತ ವರ್ಷದಲ್ಲಿ ವರುಣ್ ಧವನ್ ಗೆ ದಶಕದ ನಟ, ಕಾಶ್ಮೀರ ಫೈಲ್ಸ್ ಗೆ ಗೋಲ್ಡನ್ ಲಾರೆಲ್ ಪ್ರಶಸ್ತಿ ಒಲಿದಿದೆ.

ಐಟಿಎ ಅವಾರ್ಡ್ ಗಳನ್ನು 2001 ರಲ್ಲಿ ಅನು ರಂಜನ್ ಪ್ರಾರಂಭಿಸಿದ್ದರು. ಕಾರ್ಯಕ್ರಮವನ್ನು ಅನು ರಂಜನ್ ತಮ್ಮ ಪತಿ, ನಟ, ನಿರ್ಮಾಪಕ ಶಶಿ ರಂಜನ್ ಅವರೊಂದಿಗೆ ಮುನ್ನಡೆಸುತ್ತಿದ್ದಾರೆ. 

ಹಲವು ವರ್ಷಗಳಿಂದ ಈ ಪ್ರಶಸ್ತಿಗಳ ಮೂಲಕ ಟಿವಿ ಪ್ರತಿಭೆಗಳನ್ನು ಗುರುತಿಸಲಾಗುತ್ತಿತ್ತು. ಹಾಗೂ 2020 ರಲ್ಲಿ ಒಟಿಟಿ ವೇದಿಕೆಯಲ್ಲಿ ಬರುವ ಪ್ರತಿಭೆಗಳನ್ನೂ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.

ತೀರ್ಪುಗಾರರು ನಿರ್ಧರಿಸುವ ಅವಾರ್ಡ್ ಗಳ ಜೊತೆಗೆ ಐಟಿಎ ಜನಪ್ರಿಯ ಅವಾರ್ಡ್ ವಿಭಾಗವನ್ನೂ ಹೊಂದಿದ್ದು, ಈ ವಿಭಾಗದ ವಿಜೇತರನ್ನು ಸಾರ್ವಜನಿಕರು ಮತ ಹಾಕಿ ಆಯ್ಕೆ ಮಾಡುತ್ತಾರೆ.

ಇನ್ನು ಅದ್ಭುತ ನಟನೆಯನ್ನು ಪರಿಗಣಿಸಿ ವಿಶೇಷ ಅವಾರ್ಡ್ ಗಳನ್ನೂ ನೀಡಲಾಗುತ್ತಿದೆ. ಹಿರಿಯ ನಟಿ ರವೀನಾ ಟಂಡನ್ ಗೆ ಐಟಿಎ ಸ್ಕ್ರಾಲ್ ಆಫ್ ಆನರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸ್ಕ್ರಾಲ್ ಆಫ್ ಆನರ್ ಪ್ರಶಸ್ತಿ ಪಡೆದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ರವೀನಾ ಟಂಡನ್, ತಂಡಕ್ಕೆ, ನಿರ್ಮಾಪರು, ನಿರ್ದೇಶಕರು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
 
ಇನ್ನು ಟಿವಿ ನಟ ಅರ್ಜುನ್ ಬಿಜ್ಲಾನಿ ಎಂಟರ್ಟೈನರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದು, ಟಿವಿ ಶೋ ಬಡೇ ಅಚ್ಚೆ ಲಗ್ತೇ ಹೇ 2 ಪ್ರದರ್ಶನಕ್ಕಾಗಿ ನಕುಲ್ ಮೆಹ್ತಾ ಅವರಿಗೆ ‘ಅತ್ಯುತ್ತಮ ನಟ- ನಾಟಕ-ಟಿವಿ’ ವಿಭಾಗದ ಪ್ರಶಸ್ತಿ ಲಭಿಸಿದೆ. ಒಟಿಟಿ ವಿಭಾಗದಲ್ಲಿ ಒಟಿಟಿ-ಡ್ರಾಮ ವಿಭಾಗದ ಅತ್ಯುತ್ತಮ ನಟನ ಪ್ರಶಸ್ತಿ ಜಿಮ್ ಸರ್ಭ್ ಅವರಿಗೆ ಲಭಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com