ಅಜಯ್ ದೇವಗನ್‌ರ 'ಭೋಲಾ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್, ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ನಟ
ಅಜಯ್ ದೇವಗನ್ ಮಂಗಳವಾರ ತಮ್ಮ ಮುಂಬರುವ ನಿರ್ದೇಶನದ ಭೋಲಾ ಸಿನಿಮಾದ ಹೊಸ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರವು ಮುಂದಿನ ವರ್ಷ ಮಾರ್ಚ್ 30ರಂದು ಬಿಡುಗಡೆಯಾಗಲಿದೆ.
Published: 21st December 2022 03:17 PM | Last Updated: 21st December 2022 03:17 PM | A+A A-

ಭೋಲಾ ಸಿನಿಮಾದ ನಿರ್ದೇಶನದಲ್ಲಿ ತೊಡಗಿದ್ದ ನಟ ಅಜಯ್ ದೇವಗನ್
ಅಜಯ್ ದೇವಗನ್ ಮಂಗಳವಾರ ತಮ್ಮ ಮುಂಬರುವ ನಿರ್ದೇಶನದ ಭೋಲಾ ಸಿನಿಮಾದ ಹೊಸ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರವು ಮುಂದಿನ ವರ್ಷ ಮಾರ್ಚ್ 30ರಂದು ಬಿಡುಗಡೆಯಾಗಲಿದೆ. ಅಜಯ್ ದೇವಗನ್ ಅವರೇ ನಿರ್ದೇಶಿಸಿ, ನಟಿಸಿರುವ ಭೋಲಾ, ತನ್ನ ಮಗಳನ್ನು ಮತ್ತೆ ಸೇರಲು ವ್ಯಕ್ತಿಯ ಅನ್ವೇಷಣೆಯ ಕುರಿತಾದ ಸಾಹಸಮಯ ಸಿನಿಮಾವಾಗಿದೆ.
ಈ ಚಿತ್ರವು 2019ರ ತಮಿಳು ಚಿತ್ರ ಕೈಥಿಯ ರಿಮೇಕ್ ಆಗಿದೆ. ಮೋಷನ್ ಪೋಸ್ಟರ್ ಅಜಯ್ ದೇವಗನ್ ಅವರನ್ನು ಅಪರಾಧಿ ಎಂದು ಚಿತ್ರಿಸುತ್ತದೆ. ಆತನ ಮುಖಕ್ಕೆ ಪವಿತ್ರ ಬೂದಿಯನ್ನು ಸವರಲಾಗಿದೆ. ಆತನ ಹಣೆಯ ಮೇಲೆ ವಿಭೂತಿಯಿದ್ದು, ಶಿವ ಭಕ್ತರ ಗುರುತಾಗಿದೆ.
Ek Chattaan, Sau Shaitaan.
Iss kalyug mein aa raha hai #Bholaa, 30th March 2023.#Bholaain3D #Tabu pic.twitter.com/DoXKMutLtA— Ajay Devgn (@ajaydevgn) December 20, 2022
ಪತ್ರಿಕಾ ಪ್ರಕಟಣೆಯ ಪ್ರಕಾರ, ಭೋಲಾವನ್ನು 'ರಾತ್ರೋರಾತ್ರಿ ನಡೆಯುವ ಕಥೆಯಲ್ಲಿ ಮಾನವ ಮತ್ತು ಇತರ ವಿವಿಧ ರೂಪಗಳಲ್ಲಿ ಬರುವ ಬಹುಸಂಖ್ಯೆಯ ಶತ್ರುಗಳ ವಿರುದ್ಧ ಹೋರಾಡುವ ಒನ್ ಮ್ಯಾನ್ ಆರ್ಮಿಯ ಕಥೆ' ಎಂದು ಹೇಳಲಾಗಿದೆ. ಡ್ರಗ್-ಲಾರ್ಡ್ಸ್, ಭ್ರಷ್ಟ ಶಕ್ತಿಗಳು ಮತ್ತು ಆತನ 24 ಗಂಟೆಗಳ ಪ್ರಯಾಣದಲ್ಲಿ ಎದುರಾಗುವ ಹಲವಾರು ಹಿನ್ನಡೆಗಳನ್ನು ಎದುರಿಸಲು ಮುಂದಾಗುವ ಪಾತ್ರದಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ.
ಏಕ್ ಚಾಟ್ ತಾನ್, ಸೌ ಶೈತಾನ್ ಇಸ್ಸ್ ಕಲಿಯುಗ್ ಮೇ ಆ ರಹಾ ಹೈ. 30 ಮಾರ್ಚ್ 2023ರಂದು ಭೋಲಾ (ಒಂದು ಬಂಡೆ, ನೂರು ರಾಕ್ಷಸರು ಈ ಯುಗದಲ್ಲಿ ಭೋಲಾ ಆಗಮಿಸುತ್ತಿದೆ) ಎಂದು ಅಜಯ್ ಟ್ವೀಟ್ ಮಾಡಿ, ಪೋಸ್ಟರ್ ಹಂಚಿಕೊಂಡಿದ್ದಾರೆ.
ದೃಶ್ಯಂ 2 ರ ಇತ್ತೀಚಿನ ಯಶಸ್ಸಿನ ನಂತರ ಭೋಲಾ ಸಿನಿಮಾದಲ್ಲಿ ಅಜಯ್ ಮತ್ತು ಟಬು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಅಜಯ್ ಈ ಹಿಂದೆ ರನ್‌ವೇ 34, ಶಿವಾಯ್ ಮತ್ತು ಯು ಮಿ ಔರ್ ಹಮ್ ಅನ್ನು ನಿರ್ದೇಶಿಸಿದ್ದರು.