ರಣಬೀರ್- ಆಲಿಯಾಭಟ್ ಮುದ್ದಿನ ಮಗಳ ಹೆಸರು ಬಹಿರಂಗ!

ಆಲಿಯಾ ಭಟ್ ಕೊನೆಗೂ ತನ್ನ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ನವೆಂಬರ್ 6 ರಂದು ಆಲಿಯಾ ಭಟ್ ಮತ್ತು ರಣಬೀರ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ತಮ್ಮ ಮುದ್ದು ಮಗಳಿಗೆ 'ರಾಹಾ' ಎಂದು ನಾಮಕಾರಣ ಮಾಡಲಾಗಿದೆ. ಆಲಿಯಾ ಭಟ್ ತಮ್ಮ ಟ್ವಿಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಆಲಿಯಾ ಭಟ್, ರಣಬೀರ್

'ರಾಹಾ" ಎಂದು ಬರೆಯಲಾದ ಗೋಡೆಯ ಮೇಲೆ ನೇತಾಡುವ ಸಣ್ಣ ಫುಟ್ಬಾಲ್ ಜರ್ಸಿಯೊಂದಿಗೆ ನವಜಾತ ಶಿಶುವನ್ನು ಹಿಡಿದಿರುವ ರಣಬೀರ್ ಹಾಗೂ ತನ್ನ ಫೋಟೋವೊಂದನ್ನು ಆಲಿಯಾ ಭಟ್ ಶೇರ್ ಮಾಡಿದ್ದಾರೆ. ರಾಹಾ ಹೆಸರಿನ ಮಹತ್ವದ ಬಗ್ಗೆಯೂ ಆಲಿಯಾ ಹಂಚಿಕೊಂಡಿದ್ದಾರೆ.

ರಾಹಾ ಎಂಬ ಹೆಸರನ್ನು ತಮ್ಮ ಬುದ್ದಿವಂತ ತಂದೆ ಆಯ್ಕೆ ಮಾಡಿದ್ದಾರೆ. ಇದು ಅನೇಕ ಸುಂದರವಾದ ಅರ್ಥಗಳನ್ನು ಒಳಗೊಂಡಿದೆ. ರಾಹಾ ಅದರ ಶುದ್ಧ ರೂಪದಲ್ಲಿ ದೈವಿಕ ಮಾರ್ಗ ಎಂದರ್ಥ, ಸ್ವಾಹಿಲಿಯಲ್ಲಿ ಅವಳು ಸಂತೋಷ, ಸಂಸ್ಕೃತದಲ್ಲಿ, ರಾಹಾ ಒಂದು ಕುಲ, ಬಾಂಗ್ಲಾದಲ್ಲಿ - ವಿಶ್ರಾಂತಿ, ಸೌಕರ್ಯ, ಪರಿಹಾರ, ಅರೇಬಿಕ್ ಶಾಂತಿ, ಇದು ಸಂತೋಷ, ಸ್ವಾತಂತ್ರ್ಯ ಮತ್ತು ಆನಂದ ಎಂದರ್ಥ  ಎಂದು ಅವರು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com