ದೀಪಿಕಾ ಜೊತೆ ಬ್ರೇಕ್ ಅಪ್? ರಣವೀರ್ ಸಿಂಗ್ ಹೇಳಿಕೆ ವೈರಲ್!
ಬಾಲಿವುಡ್ ಪ್ರಸಿದ್ಧ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ಕನ್ನಡತಿ ದೀಪಿಕಾ ನಡುವಣ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದರು.
Published: 01st October 2022 04:59 PM | Last Updated: 13th October 2022 04:21 PM | A+A A-

ರಣವೀರ್, ದೀಪಿಕಾ ಪಡುಕೋಣೆ
ಬಾಲಿವುಡ್ ಪ್ರಸಿದ್ಧ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ಕನ್ನಡತಿ ದೀಪಿಕಾ ನಡುವಣ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದರು. ಬ್ರೇಕಿಂಗ್! ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವಣ ಎಲ್ಲವೂ ಚೆನ್ನಾಗಿಲ್ಲ ಎಂದು ಟ್ವಿಟಿಗರು ಪೋಸ್ಟ್ ಮಾಡಿದ ಕೂಡಲೇ ವದಂತಿಗಳು ಕೇಳಿಬರಲು ಆರಂಭವಾಗಿತ್ತು.
BREAKING ! Everything is not OK between #DeepikaPadukone & #RanveerSingh !!!
— Umair Sandhu (@UmairSandu) September 27, 2022
ಇದ್ದಕ್ಕಿದ್ದಂತೆ ಹರಡಿದ ಈ ವದಂತಿ ಸತ್ಯವೇ ಅಥವಾ ಇಲ್ಲವೇ ಎಂಬ ಕಳವಳ ವ್ಯಕ್ತವಾಗಿತ್ತು. ಇತ್ತೀಚೆಗೆ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ಬರುವುದರೊಂದಿಗೆ ಈ ಊಹಾಪೋಹಗಳು ಮತ್ತಷ್ಟು ಉಲ್ಬಣಗೊಂಡಿತ್ತು. ಆದಾಗ್ಯೂ, ನಟ ರಣವೀರ್ ಸಿಂಗ್ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಪತ್ನಿ ಜೊತೆಗಿನ ತನ್ನ ಸಂಬಂಧವನ್ನು ವಿವರಿಸುವುದರೊಂದಿಗೆ ಈ ಎಲ್ಲಾ ವದಂತಿಗಳಿಗೆ ಪುಲ್ ಸ್ಟಾಪ್ ಇಟ್ಟಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು: ಮುಂಬೈ ನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು!
Meanwhile: Ranveer about Deepika in today’s event #DeepikaPadukone #RanveerSingh #Deepveer https://t.co/Jn6vfb3ZKs pic.twitter.com/MTS7GfzpjZ
— . (@rs____321) September 27, 2022
'2012ರಲ್ಲಿ ದೀಪಿಕಾ ಜೊತೆಗೆ ಡೇಟಿಂಗ್ ಆರಂಭಿಸಿ 2018 ರಲ್ಲಿ ವಿವಾಹವಾದೆವು. ನನಗೆ ಅವಳ ಬಗ್ಗೆ ಅತ್ಯಂತ ಗೌರವವನ್ನು ಹೊರತುಪಡಿಸಿ ಬೇರೇನೂ ಇಲ್ಲ. ನಾನು ಅವಳನ್ನು ತುಂಬಾ ಇಷ್ಟಪಡುತ್ತೇನೆ. ನನ್ನ ವೈಯಕ್ತಿಕ ಜೀವನದಲ್ಲಿ ಆಕೆಯಿಂದ ಬಹಳಷ್ಟು ಕಲಿತಿದ್ದೇನೆ. ಶೀಘ್ರದಲ್ಲೇ ಎಲ್ಲಿರಗೂ ಸರ್ ಪ್ರೈಸ್ ಕಾದಿದೆ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದರು.
ಈ ನಡುವೆ ಈ ವದಂತಿಗಳಿಗೆ ಕಾರಣರಾದ ಟ್ವಿಟಿಗ ಉಮೈರ್ ಸಂಧು ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.