2017ರ ಕಾಲ್ತುಳಿತ ಪ್ರಕರಣ: ಶಾರುಖ್ ಖಾನ್‌ಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!

2017ರಲ್ಲಿ ವಡೋದರಾ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ರದ್ದುಗೊಳಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದು ನಟ ಶಾರುಖ್ ಖಾನ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ರಿಲೀಫ್ ನೀಡಿದೆ.
ಶಾರುಖ್ ಖಾನ್
ಶಾರುಖ್ ಖಾನ್

ನವದೆಹಲಿ: 2017ರಲ್ಲಿ ವಡೋದರಾ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ರದ್ದುಗೊಳಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದು ನಟ ಶಾರುಖ್ ಖಾನ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ರಿಲೀಫ್ ನೀಡಿದೆ. 

ನ್ಯಾಯಮೂರ್ತಿ ಅಜಯ್ ರಸ್ತೋಗಿ ಮತ್ತು ನ್ಯಾಯಮೂರ್ತಿ ಸಿಟಿ ರವಿಕುಮಾರ್ ಅವರ ಪೀಠವು ಶಾರುಖ್ ಖಾನ್ ವಿರುದ್ಧ ದೂರುದಾರರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತು.

ದೂರುದಾರರು ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದರು. ನಟನ ವಿರುದ್ಧ ದೂರುದಾರರು ಸಲ್ಲಿಸಿದ್ದ ದೂರನ್ನು ರದ್ದುಗೊಳಿಸಿ ಗುಜರಾತ್ ಹೈಕೋರ್ಟ್ ನೀಡಿದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಏಪ್ರಿಲ್ 27, 2022ರಂದು ಗುಜರಾತ್ ಹೈಕೋರ್ಟ್ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಆದೇಶಿಸಿತು. 2017 ರಲ್ಲಿ ತನ್ನ ರಯೀಸ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ವಡೋದರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ದೂರುದಾರರು ಆರೋಪಿಸಿದ್ದಾರೆ. ಪ್ರಕರಣದ ವೇಳೆ ನಟ ಶಾರುಖ್ ಖಾನ್ ತಮ್ಮ ಹಿಂದಿ ಚಲನಚಿತ್ರ ರಯೀಸ್ ಚಿತ್ರ ನಿರ್ಮಾಣ ತಂಡದೊಂದಿಗೆ ಪ್ರಚಾರಕ್ಕಾಗಿ ಮುಂಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು.

ದೂರುದಾರರಾದ ಜಿತೇಂದ್ರ ಮಧುಭಾಯಿ ಸೋಲಂಕಿ ಅವರು ವಡೋದರದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಶಾರುಖ್ ಖಾನ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಶಾರುಖ್ ಖಾನ್ ವಡೋದರಾ ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದು, ನಿಲ್ದಾಣದಲ್ಲಿ ನೆರೆದಿದ್ದ ಜನರ ಮೇಲೆ ಟೀ ಶರ್ಟ್ ಮತ್ತು ಸ್ಮೈಲಿ ಬಾಲ್ ಎಸೆದಿದ್ದಾರಿಂದ ಕಾಲ್ತುಳಿತಕ್ಕೆ ಕಾರಣವಾಯಿತು ಎಂದಿದ್ದರು.

ಈ ದೂರನ್ನು ರದ್ದುಗೊಳಿಸುವಂತೆ ಶಾರುಖ್ ಖಾನ್ ಅವರು ಬಯಸಿದ ಅರ್ಜಿಯ ಮೇಲೆ ಗುಜರಾತ್‌ನ ಹೈಕೋರ್ಟ್ ಏಪ್ರಿಲ್ 27, 2022 ರಂದು  ಶಾರುಖ್ ಖಾನ್ ವಿರುದ್ಧ ಸಲ್ಲಿಸಲಾದ ದೂರನ್ನು ರದ್ದುಗೊಳಿಸಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com