ಅಕ್ಷಯ್ ಕುಮಾರ್-ಪಂಕಜ್ ತ್ರಿಪಾಠಿ ಅಭಿನಯದ 'OMG 2' ಎರಡು ದಿನದಲ್ಲಿ 25.56 ಕೋಟಿ ರೂ. ಗಳಿಕೆ!

ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ 'OMG 2' ಸಿನಿಮಾ ಎರಡು ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ 15.30 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದೆ.
ಓಎಂಜಿ 2 ಚಿತ್ರದಲ್ಲಿ ಅಕ್ಷಯ್ ಕುಮಾರ್
ಓಎಂಜಿ 2 ಚಿತ್ರದಲ್ಲಿ ಅಕ್ಷಯ್ ಕುಮಾರ್

ಮುಂಬೈ: ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ 'OMG 2' ಸಿನಿಮಾ ಎರಡು ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ 15.30 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದೆ.

ಅಮಿತ್ ರೈ ಬರೆದು ನಿರ್ದೇಶಿಸಿದ 'OMG 2' ಚಿತ್ರದಲ್ಲಿ ತ್ರಿಪಾಠಿ ಶಿವನ ಭಕ್ತನಾಗಿ ಕಾಂತಿ ಶರಣ್ ಮುದ್ಗಲ್ ಮತ್ತು ಅಕ್ಷಯ್ ಕುಮಾರ್ ದೇವರ ಸಂದೇಶವಾಹಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಯಾಮಿ ಗೌತಮ್ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ.

'ಪ್ಯಾರ್ ಔರ್ ಅಭಾರ್ (ಪ್ರೀತಿ ಮತ್ತು ಕೃತಜ್ಞತೆ) ಮೊದಲನೇ ದಿನ 10.26 ಕೋಟಿ ರೂ., ಎರಡನೇ ದಿನ 15.30 ಕೋಟಿ ರೂ. ಗಳಿಸಿದೆ. ಒಟ್ಟು 25.56 ಕೋಟಿ ರೂ. ಗಳಿಕೆ ಕಂಡಿದೆ' ಎಂದು ಚಿತ್ರತಂಡ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

'OMG 2' ಸಿನಿಮಾವನ್ನು ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ವಕಾವೂ ನಿರ್ಮಿಸಿದ್ದಾರೆ. ಇದು ಹದಿಹರೆಯದವರ ವಿವಿಧ ಸಮಸ್ಯೆಗಳು ಮತ್ತು ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆ ಕುರಿತು ಹೇಳುತ್ತದೆ.

Viacom18 ಸ್ಟುಡಿಯೋಸ್‌ನಿಂದ ಪ್ರಸ್ತುತಪಡಿಸಲಾದ ಸಿನಿಮಾವು 2012ರಲ್ಲಿ ಬಿಡುಗಡೆಯಾದ ಕುಮಾರ್ ಮತ್ತು ಪರೇಶ್ ರಾವಲ್ ನಟಿಸಿದ 'OMG- ಓ ಮೈ ಗಾಡ್!'ನ ಆಧ್ಯಾತ್ಮಿಕ ಸೀಕ್ವೆಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com