2 ದಿನದಲ್ಲಿ 236 ಕೋಟಿ ರೂ. ಗಳಿಕೆ; ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ರಣಬೀರ್ ಕಪೂರ್-ರಶ್ಮಿಕಾ ಅಭಿನಯದ 'ಅನಿಮಲ್'

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ "ಅನಿಮಲ್" ಚಿತ್ರ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 236 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದೆ.
ಅನಿಮಲ್ ಚಿತ್ರದ ಪೋಸ್ಟರ್
ಅನಿಮಲ್ ಚಿತ್ರದ ಪೋಸ್ಟರ್

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ "ಅನಿಮಲ್" ಚಿತ್ರ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 236 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದೆ.

'ಕಬೀರ್ ಸಿಂಗ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಶುಕ್ರವಾರ (ಡಿಸೆಂಬರ್ 1) ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿದೆ.

ಪ್ರೊಡಕ್ಷನ್ ಬ್ಯಾನರ್ ಟಿ-ಸೀರೀಸ್ ಅನಿಮಲ್ ಚಿತ್ರದ ಎರಡು ದಿನಗಳ ಬಾಕ್ಸ್ ಆಪೀಸ್ ಸಂಗ್ರಹವನ್ನು ಹಂಚಿಕೊಂಡಿದೆ. ಅನಿಮಲ್ ಚಿತ್ರ್ವು ಸಿಬಿಎಫ್‌ಸಿಯಿಂದ 'A' ಪ್ರಮಾಣಪತ್ರವನ್ನು ಪಡೆದಿದೆ.

'ಯಶಸ್ಸಿನ ಸ್ಕ್ರಿಪ್ಟ್ ಅನ್ನು ಪುನಃ ಬರೆಯಲಾಗುತ್ತಿದೆ. 2 ದಿನದಲ್ಲಿ ಪ್ರಪಂಚದಾದ್ಯಂತ ಅನಿಮಲ್ ಚಿತ್ರವು 236 ಕೋಟಿ ರೂ. ಸಂಗ್ರಹಿಸಿದೆ' ಎಂದು T-ಸೀರೀಸ್ ಟ್ವೀಟ್ ಮಾಡಿದೆ.

ಅನಿಮಲ್ ಚಿತ್ರದಲ್ಲಿ ರಣಬೀರ್ ಅವರೊಂದಿಗೆ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಟ್ರಿಪ್ಟಿ ಡಿಮ್ರಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಅನಿಮಲ್' ಚಿತ್ರವನ್ನು ಭೂಷಣ್ ಕುಮಾರ್ ಮತ್ತು ಕೃಷ್ಣ ಕುಮಾರ್ ಅವರ T-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com