ಮೊದಲ ದಿನವೇ ನೂರು ಕೋಟಿ ರೂ. ಗಳಿಕೆ ಕಂಡ 'ಅನಿಮಲ್', ರಣಬೀರ್ ಕಪೂರ್ ಖುಷ್!

ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಚಿತ್ರ ಬಿಡುಗಡೆಯಾದ ಮೊದಲ ದಿನವೇ ಚಿತ್ರದ ಗಳಿಕೆ ನೂರು ಕೋಟಿ ರೂ ದಾಟಿದೆ.
ರಣಬೀರ್ ಕಪೂರ್ ಅಭಿನಯದ ಅನಿಮಲ್
ರಣಬೀರ್ ಕಪೂರ್ ಅಭಿನಯದ ಅನಿಮಲ್

ಮುಂಬೈ: ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಚಿತ್ರ ಬಿಡುಗಡೆಯಾದ ಮೊದಲ ದಿನವೇ ಚಿತ್ರದ ಗಳಿಕೆ ನೂರು ಕೋಟಿ ರೂ ದಾಟಿದೆ.

ಹೌದು.. ಅನಿಮಲ್ ಬಿಡುಗಡೆಯಾದ ದಿನದಂದು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ರೂ 116 ಕೋಟಿ ಸಂಗ್ರಹಿಸಿದ್ದು, ಅನಿಮಲ್ ಚಿತ್ರ ರಣಬೀರ್ ಕಪೂರ್ ವೃತ್ತಿಜೀವನದ ಅತ್ಯುತ್ತಮ ಆರಂಭಿಕ ಕಂಡ ಚಿತ್ರವಾಗಿದೆ. ಈ ಬಗ್ಗೆ ಪ್ರೊಡಕ್ಷನ್ ಹೌಸ್ ಟಿ-ಸಿರೀಸ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಅನಿಮಲ್ ಚಿತ್ರ ಅತೀದೊಡ್ಡ ಓಪನಿಂಗ್ ಕಂಡಿದ್ದು, ಮೊದಲ ದಿನ ಬರೊಬ್ಬರಿ 116 ಕೋಟಿ ರೂ ಗಳಿಕೆ ಕಂಡಿದೆ. 

ಕಬೀರ್ ಸಿಂಗ್, ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪ್ಯಾನ್-ಇಂಡಿಯಾ ಚಲನಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಟ್ರಿಪ್ಟಿ ಡಿಮ್ರಿ ಕೂಡ ಇದ್ದಾರೆ. ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿರುವ ಈ ಚಿತ್ರವು ಶುಕ್ರವಾರ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com