2ನೇ ದಿನ ಸತ್ಯಪ್ರೇಮ್ ಕಿ ಕಥಾ 7 ಕೋಟಿ ರೂ. ಗಳಿಕೆ

ಕಾರ್ತಿಕ್ ಆರ್ಯನ್ ಹಾಗೂ ಕೈರಾ ಅದ್ವಾನಿ ನಟಿಸಿರುವ ಸತ್ಯಪ್ರೇಮ್ ಕಿ ಕಥಾ ಸಿನಿಮಾ 2 ನೇ ದಿನ 7 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಸತ್ಯಪ್ರೇಮ್ ಕಿ ಕಥಾ
ಸತ್ಯಪ್ರೇಮ್ ಕಿ ಕಥಾ

ಮುಂಬೈ: ಕಾರ್ತಿಕ್ ಆರ್ಯನ್ ಹಾಗೂ ಕೈರಾ ಅದ್ವಾನಿ ನಟಿಸಿರುವ ಸತ್ಯಪ್ರೇಮ್ ಕಿ ಕಥಾ ಸಿನಿಮಾ 2 ನೇ ದಿನ 7 ಕೋಟಿ ರೂಪಾಯಿ ಆದಾಯ ಗಳಿಸಿದೆ.

ನಿರ್ಮಾಪಕ ಸಜೀದ್ ನಾದಿಯಾವಾಲ ಹಾಗೂ ನಮಃ ಪಿಕ್ಚರ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಗುರುವಾರದಂದು ಸಿನಿಮಾ ದೇಶಾದ್ಯಂತ ತೆರೆ ಕಂಡಿತ್ತು. ಮೊದಲ ದಿನದಂದು ಚಿತ್ರ 9.25 ಕೋಟಿ ರೂಪಾಯಿ ಗಳಿಸಿತ್ತು.

ಸತ್ಯಪ್ರೇಮ್ ಕೀ ಕಥಾ ನೈಜ ಪ್ರೇಮಕಥೆಯಾಗಿದ್ದು, ಬಲವಾದ ಸಮಾಜಿಕ ಸಂದೇಶವನ್ನು ಹೊಂದಿದೆ. ಈದ್ ದಿನ (ರಜೆಯ ದಿನದಂದು) ಈ ಸಿನಿಮಾ ಬಿಡುಗಡೆಯಾಗಿದ್ದು, ಶುಕ್ರವಾರದಂದು ಮೊದಲ ದಿನಕ್ಕಿಂತ ಕಡಿಮೆ ಆದಾಯ ಗಳಿಸಿದೆ.
 
ಸತ್ಯಪ್ರೇಮ್ ಕಿ ಕಥಾ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಮೀರ್ ವಿದ್ವಾನ್ಸ್ ನಿರ್ದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com