ರಣಬೀರ್ ಕಪೂರ್ ಹುಟ್ಟುಹಬ್ಬದಂದು ಬಹುನಿರೀಕ್ಷಿತ 'ಅನಿಮಲ್' ಚಿತ್ರದ ಟೀಸರ್ ಬಿಡುಗಡೆ, ರಶ್ಮಿಕಾ ಮಂದಣ್ಣ ಕ್ಯೂಟ್

ರಣಬೀರ್ ಕಪೂರ್ 41ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 'ಅನಿಮಲ್' ಚಿತ್ರತಂಡ ಚಿತ್ರದ ಟೀಸರ್ ಅನ್ನು ಗುರುವಾರ ಬಿಡುಗಡೆ ಮಾಡಿದೆ. 'ಅರ್ಜುನ್ ರೆಡ್ಡಿ' ಮತ್ತು 'ಕಬೀರ್ ಸಿಂಗ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪ್ಯಾನ್-ಇಂಡಿಯಾ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ.
ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್
ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್
Updated on

ಮುಂಬೈ: ರಣಬೀರ್ ಕಪೂರ್ 41ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 'ಅನಿಮಲ್' ಚಿತ್ರತಂಡ ಚಿತ್ರದ ಟೀಸರ್ ಅನ್ನು ಗುರುವಾರ ಬಿಡುಗಡೆ ಮಾಡಿದೆ.

'ಅರ್ಜುನ್ ರೆಡ್ಡಿ' ಮತ್ತು 'ಕಬೀರ್ ಸಿಂಗ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪ್ಯಾನ್-ಇಂಡಿಯಾ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ 2.26 ನಿಮಿಷಗಳ ಟೀಸರ್‌ನಲ್ಲಿ, ತಂದೆ-ಮಗನ ಸಂಬಂಧದಲ್ಲಿ ರಣಬೀರ್ ಕಪೂರ್ ಮತ್ತು ಅನಿಲ್ ಕಪೂರ್ ಅವರ ಪಾತ್ರಗಳನ್ನು ತೋರಿಸುತ್ತದೆ. ರಣವೀರ್ ಕಪೂರ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ರಕ್ತ ಸಿಕ್ತ ಅಧ್ಯಾಯವನ್ನು ತೆಗೆದಿಟ್ಟಿದೆ.

'ಅನಿಮಲ್' ಒಂದು ಸಿನಿಮೀಯ ಕಾಳ್ಗಿಚ್ಚು ಆಗಿದ್ದು, ಥ್ರಿಲ್ ಮತ್ತು ಪ್ಯಾಶನ್ ಮೂಲಕ ಮೂಲಕ ನಿಮ್ಮನ್ನು ವೈಲ್ಡ್ ಸವಾರಿಗೆ ಕರೆದೊಯ್ಯುವುದು ಖಚಿತ' ಎಂದು ಚಿತ್ರತಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದೆ.

ಈ ಹಿಂದೆ ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ರಣಬೀರ್ ಕಪೂರ್. 'ಅನಿಮಲ್' ತನಗೆ 'ಹೊಸ ಪ್ರದೇಶ' ಎಂದು ಕರೆದಿದ್ದರು.

'ಇದು ಕ್ರೈಮ್ ಡ್ರಾಮಾ ಆಗಿದ್ದು, ತಂದೆ-ಮಗನ ಕಥೆಯನ್ನು ಒಳಗೊಂಡಿದೆ. ಇದು ಪ್ರೇಕ್ಷಕರು ನಾನು ಮಾಡಬೇಕೆಂದು ನಿರೀಕ್ಷಿಸದ ವಿಷಯವಾಗಿದೆ. ಇದು ಬೂದು ಛಾಯೆಯನ್ನು ಹೊಂದಿದೆ. ನಾನು ನಾನಲ್ಲದ ಪಾತ್ರ ಇದಾಗಿದೆ. ಹಾಗಾಗಿ, ನಾನು ಇದನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದರು.

ಚಿತ್ರದಲ್ಲಿ, ರಶ್ಮಿಕಾ ಮಂದಣ್ಣ ಅವರು ರಣಬೀರ್ ಕಪೂರ್ ಅವರ ಪತ್ನಿಯಾಗಿ ಕಾಣಿಸಿಕೊಂಡಿದ್ದು, ಬಾಬಿ ಡಿಯೋಲ್ ಅವರು ವಿಲನ್ ಆಗಿ ನಟಿಸಿದ್ದಾರೆ.

ತೃಪ್ತಿ ದಿಮ್ರಿ ಸಹ ನಟಿಸಿರುವ 'ಅನಿಮಲ್' ಸಿನಿಮಾ ಡಿಸೆಂಬರ್ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

ಚಿತ್ರವನ್ನು ಭೂಷಣ್ ಕುಮಾರ್ ಮತ್ತು ಕೃಷ್ಣ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com