ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ನಂತರ ಇದೀಗ ಐಶ್ವರ್ಯಾ ರೈ ಬಚ್ಚನ್‌ ಡೀಪ್‌ಫೇಕ್ ವಿಡಿಯೋ ವೈರಲ್

ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಮತ್ತು ನಟಿ ಕಾಜೋಲ್ ನಂತರ ಇದೀಗ ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರ ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಐಶ್ವರ್ಯಾ ರೈ ಅವರು ಈಜುಡುಗೆಯನ್ನು ಧರಿಸಿ ಈಜುಕೊಳದಲ್ಲಿ ಕುಳಿತಿರುವ ವಿಡಿಯೋ ಇದಾಗಿದೆ. 
ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್

ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಮತ್ತು ನಟಿ ಕಾಜೋಲ್ ನಂತರ ಇದೀಗ ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರ ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಐಶ್ವರ್ಯಾ ರೈ ಅವರು ಈಜುಡುಗೆಯನ್ನು ಧರಿಸಿ ಈಜುಕೊಳದಲ್ಲಿ ಕುಳಿತಿರುವ ವಿಡಿಯೋ ಇದಾಗಿದೆ. 

ಇನ್ನೊಬ್ಬ ಮಹಿಳೆಯ ದೇಹಕ್ಕೆ ನಟಿಯ ಮುಖವನ್ನು ಮಾರ್ಫ್ ಮಾಡಿರುವ ವಿಡಿಯೋದಲ್ಲಿ 'ಐಶ್ವರ್ಯಾ ಸ್ನಾನ ಮಾಡುತ್ತಿದ್ದಾರೆ' ಎಂಬ ಪಠ್ಯವನ್ನು ಸೇರಿಸಲಾಗಿದೆ. ವಿಡಿಯೋದಲ್ಲಿ ಕ್ಯಾಮೆರಾ ಕಡೆಗೆ ತಿರುಗಿರುವ ಅವರು ನಗುತ್ತಾ ಇರುವುದು ಕಂಡುಬರುತ್ತದೆ. ಮೇಲ್ನೋಟಕ್ಕೆ ಇದು ನಕಲಿ ವಿಡಿಯೋ ಎಂಬುದು ಕಂಡುಬರುತ್ತದೆ. 

ಆದಾಗ್ಯೂ, ಹಲವಾರು ನೆಟಿಜನ್‌ಗಳು ಈ ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ವಿಡಿಯೋದಲ್ಲಿ ಇರುವುದು ಐಶ್ವರ್ಯಾ ರೈ ಅವರೆ ಎಂದು ಕೆಲವರು ನಂಬಿದರೆ, ಕೆಲವರು ಈ ವಿಡಿಯೋ AI- ರಚಿತವಾಗಿದೆ ಎಂದು ಸೂಚಿಸಿದ್ದಾರೆ.

ಒಬ್ಬ ಬಳಕೆದಾರರು ‘ಬ್ಯೂಟಿ ಕ್ವೀನ್’ ಎಂದು ಬರೆದಿದ್ದರೆ, ಮತ್ತೊಬ್ಬರು ‘AI ಮ್ಯಾಜಿಕ್ .. ಅತ್ಯಂತ ಅಪಾಯಕಾರಿ’ ಎಂದು ಬರೆದಿದ್ದಾರೆ. ‘ನೀರಿನಲ್ಲಿ ಚಂದ್ರ’ ಎಂದು ಮತ್ತೊಂಬರು ಕಮೆಂಟ್ ಮಾಡಿದರೆ, ‘ಎಡಿಟ್ ಫೋಟೋ ಹೈ ಯಾರ್’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಆಗಿತ್ತು. ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದಲ್ಲಿ ಅದರ ಸಂಭಾವ್ಯ ಪರಿಣಾಮಗಳ ಕುರಿತು ಹೆಚ್ಚು ಅಗತ್ಯವಿರುವ ಚರ್ಚೆಯನ್ನು ಹುಟ್ಟುಹಾಕಿತ್ತು. 

ಅದಾದ ಕೆಲವು ದಿನಗಳ ಹಿಂದೆ ನಟಿ ಕತ್ರಿನಾ ಕೈಫ್ ಮತ್ತು ಕಾಜೋಲ್ ಅವರ ಡೀಪ್‌ಫೇಕ್ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com