ಮುಂಬೈ: ಬಾಲಿವುಡ್ ನಟಿ ಕಾಜೋಲ್ ಅವರ ತಾಯಿ ತನುಜಾ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉಸಿರಾಟ ತೊಂದರೆ ಕಾಣಿಸಿಕೊಂಡ ಅವರನ್ನು ತನುಜಾ ಅವರನ್ನು ಜುಹುವಿನಲ್ಲಿರುವ ಖಾಸಗಿ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ನಿಗಾವಣೆಯಲ್ಲಿರುವುದಾಗಿ ಆಪ್ತ ಮೂಲಗಳು ತಿಳಿಸಿವೆ.
ಐಸಿಯುನಲ್ಲಿರುವ ತನುಜಾ ಆರೋಗ್ಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರ ನಿರ್ಮಾಪಕ ಕುಮಾರ್ ಸೇನೆ ಸಮರ್ಥ್ ಹಾಗೂ ನಟಿ ಶೋಭನಾ ಸಮರ್ಥ್ ಪುತ್ರಿಯಾಗಿರುವ ತನುಜಾ, ಪತಿ ಶೋಮು ಮುಖರ್ಜಿ ಕೂಡಾ ಚಿತ್ರ ನಿರ್ಮಾಪಕರಾಗಿದ್ದು, ಹಲವು ಚಿತ್ರಗಳನ್ನು ನಿರ್ಮಿಸಿದ್ದರು.
Advertisement