ಮನೆಯಲ್ಲಿ ಊಟ, ಹಾಸಿಗೆ, ಬಾತ್‌ರೂಮ್ ಕೊಡದೆ ಚಿತ್ರಹಿಂಸೆ: ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಆರೋಪ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಕುಟುಂಬ ಸದಸ್ಯರು ಆಲಿಯಾ ಅವರನ್ನು ಮನೆಯಿಂದ ಹೊರಹಾಕಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದಾರೆ ಅಂತ ಆಲಿಯಾ ಪರ ವಕೀಲರಾದ ರಿಜ್ವಾನ್ ಸಿದ್ದಿಕಿ ಹೇಳಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ
ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಕುಟುಂಬ ಸದಸ್ಯರು ಆಲಿಯಾ ಅವರನ್ನು ಮನೆಯಿಂದ ಹೊರಹಾಕಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದಾರೆ ಅಂತ ಆಲಿಯಾ ಪರ ವಕೀಲರಾದ ರಿಜ್ವಾನ್ ಸಿದ್ದಿಕಿ ಹೇಳಿದ್ದಾರೆ.  

ನಟ ನವಾಜುದ್ದೀನ್ ಸಿದ್ಧಿಕಿ ಹಾಗೂ ಅವರ ಪತ್ನಿ ಆಲಿಯಾ ಮಧ್ಯೆ ಯಾವುದು ಸರಿಯಿಲ್ಲ ಎಂದು ಕಳೆದ ಎರಡು ವರ್ಷಗಳ ಹಿಂದೆ ಜಗಜ್ಜಾಹೀರಾಗಿತ್ತು. ಅಲ್ಲಿಂದ ಇಂದಿನವರೆಗೆ ಇಬ್ಬರ ಮಧ್ಯೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. "ಈಗ ನವಾಜುದ್ದೀನ್ ಮನೆಯವರು ಊಟ, ತಿಂಡಿ ಕೊಟ್ಟಿಲ್ಲ, ಬಾತ್‌ರೂಮ್‌ಗೆ ಹೋಗಲು ಬಿಡುತ್ತಿರಲಿಲ್ಲ, ಹಾಸಿಗೆ ಕೊಡುತ್ತಿರಲಿಲ್ಲ" ಎಂದು ಆಲಿಯಾ ವಕೀಲರು ಹೇಳಿದ್ದಾರೆ.

ನವಾಜುದ್ದೀನ್ ಹಾಗೂ ಅವರ ಕುಟುಂಬವು ಆಲಿಯಾರನ್ನು ಮನೆಯಿಂದ ಹೊರಗಡೆ ಹಾಕಲು ಏನು ಬೇಕೋ ಅದನ್ನು ಮಾಡಿತ್ತು. ಅವರು ಆಲಿಯಾ ವಿರುದ್ಧ ಅಸಮರ್ಥನೀಯ ಕ್ರಿಮಿನಲ್ ದೂರು ದಾಖಲಿಸಿದ್ದರು. ಅದಾದ ನಂತರ ಸೂರ್ಯಾಸ್ತ ಆದಮೇಲೆ ಪದೇ ಪದೇ ಆಲಿಯಾಗೆ ಪೊಲೀಸರು ಠಾಣೆಗೆ ಬರುವಂತೆ ಹೇಳುತ್ತಿದ್ದರು.

ಪೊಲೀಸ್ ಇಲಾಖೆಯ ಕಾರ್ಯವೈಖರಿ, ದೋಷಗಳನ್ನು ನಾನು ನೇರವಾಗಿ ಹೇಳಲು ಇಚ್ಛಿಸೋದಿಲ್ಲ. ಆದರೆ ಆಲಿಯಾರ ಹಕ್ಕುಗಳನ್ನು ರಕ್ಷಿಸಲು ಯಾವ ಪೊಲೀಸ್ ಅಧಿಕಾರಿಯೂ ಬಂದಿಲ್ಲ. ಪೊಲೀಸ್ ಅಧಿಕಾರಿಗಳ ಮುಂದೆ ಆಲಿಯಾಗೆ ಅವಮಾನವಾಗಿದೆ. ನವಾಜುದ್ದೀನ್ ಸಿದ್ದಿಕಿ ಅವರ ಜೊತೆಗಿನ ಸಂಬಂಧವನ್ನು ಪೊಲೀಸ್ ಅಧಿಕಾರಿಯ ಮುಂದೆ ಪ್ರಶ್ನೆ ಮಾಡಲಾಯ್ತು, ಅಪ್ರಾಪ್ತ ಮಗನ ಬಗ್ಗೆಯೂ ಪ್ರಶ್ನಿಸಲಾಯ್ತು. ಆದರೂ ಐಪಿಸಿ ಸೆಕ್ಷನ್ 509 ರ ಅಡಿಯಲ್ಲಿ ಆಲಿಯಾ ಅವರು ನೀಡಿದ ಲಿಖಿತ ದೂರಿನ ಮೇರೆಗೆ ಪೊಲೀಸ್ ಅಧಿಕಾರಿಗಳು ಕ್ರಮಕೈಗೊಂಡಿಲ್ಲ" ಎಂದು ಆಲಿಯಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಅವರು ಹೇಳಿದ್ದಾರೆ.

"ಕಳೆದ ಏಳು ದಿನಗಳಿಂದ ಆಲಿಯಾಗೆ ಆಹಾರ ಕೊಡೋದಿಲ್ಲ, ಹಾಸಿಗೆ ಇಲ್ಲ, ಬಾತ್‌ರೂಮ್ ಇಲ್ಲ ಎಂದು ಹೇಳಿದ್ದಾರೆ. ಆಲುಯಾ ಸುತ್ತ ಬಾಡಿಗಾರ್ಡ್ಸ್ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಆಲಿಯಾ ಪ್ರಸ್ತುತ ಅಪ್ರಾಪ್ತ ಮಕ್ಕಳ ಜೊತೆಗೆ ಹಾಲ್‌ನಲ್ಲಿ ಇದ್ದಾರೆ. ಅಲ್ಲಿಯೂ ಸಿಸಿಟಿವಿ ಹಾಕಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಹಾಗೂ ಅವರ ಕುಟುಂಬದ ವಿರುದ್ಧ ನನ್ನ ಕಕ್ಷಿದಾರರು ಯಾವುದೇ ಪೊಲೀಸ್ ದೂರು ನೀಡುವಂತಹ ಫೈಲ್‌ಗೆ ನಾನು ಸಹಿ ಹಾಕಿಸಿಕೊಳ್ಳಬಾರದು ಎಂದು ಅಂದುಕೊಂಡಿದ್ದಾರೆ. ಎಲ್ಲ ಅಡೆತಡೆಗಳ ಮಧ್ಯೆ ಕೋರ್ಟ್ ಕೇಸ್‌ಗೆ ಸಂಬಂಧಪಟ್ಟಂತೆ ಸಹಿ ಹಾಕಿಸಿಕೊಳ್ಳಲು ಅವರ ಮನೆಗೆ ಹೋದಾಗ ನನಗಾಗಲೀ, ನನ್ನ ಕಕ್ಷಿದಾರರಿಗಾಗಲೀ, ನನ್ನ ಟೀಂಗಾಗಲೀ ರಕ್ಷಣೆ ಕೊಡಲು ಯಾವ ಪೊಲೀಸ್ ಅಧಿಕಾರಿಯೂ ಬಂದಿಲ್ಲ" ಎಂದು ಆಲಿಯಾ ಪರ ವಕೀಲರು ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com