ಕಿರುಕುಳ ಪ್ರಕರಣ: ನಟ ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಕುಟುಂಬಕ್ಕೆ ಕ್ಲೀನ್ ಚಿಟ್
ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದ ನಾಲ್ವರಿಗೆ ಉತ್ತರಪ್ರದೇಶದ ಮುಜಾಫರ್ನಗರದ ನ್ಯಾಯಾಲಯವು ಕಿರುಕುಳ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ.
Published: 28th April 2022 04:02 PM | Last Updated: 28th April 2022 04:02 PM | A+A A-

ನವಾಜುದ್ದೀನ್ ಸಿದ್ದಿಕಿ
ಮುಜಾಫರ್ನಗರ: ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದ ನಾಲ್ವರಿಗೆ ಉತ್ತರಪ್ರದೇಶದ ಮುಜಾಫರ್ನಗರದ ನ್ಯಾಯಾಲಯವು ಕಿರುಕುಳ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ.
ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯದ ನ್ಯಾಯಾಧೀಶರಾದ ಸಂಜೀವ್ ಕುಮಾರ್ ತಿವಾರಿ ಪ್ರಕರಣದ ಅವರು ಮುಕ್ತಾಯದ ವರದಿಯನ್ನು ಪ್ರಸ್ತುತಪಡಿಸಲು ಮತ್ತು ದೂರುದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಪಾರ್ಟಿಗಳಲ್ಲಿ ನಕಲಿತನವೇ ಹೆಚ್ಚು; ನಕಲಿಗಳ ನಡುವೆ ಇರಲು ಇಷ್ಟವಿಲ್ಲ ಎಂದ ನವಾಜುದ್ದೀನ್ ಸಿದ್ಧಿಕಿ
ನವಾಜುದ್ದೀನ್ ಸಿದ್ದಿಕಿ, ಅವರ ಸಹೋದರರಾದ ಮಿನಾಜುದ್ದೀನ್, ಫಯಾಜುದ್ದೀನ್, ಅಯಾಜುದ್ದೀನ್ ಮತ್ತು ಅವರ ತಾಯಿ ಮೆಹರುನಿಸ್ಸಾ ಅವರಿಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ.
ಮಿನಾಜುದ್ದೀನ್ ಸಿದ್ದಿಕಿ 2012ರಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಕುಟುಂಬದ ಇತರೆ ಸದಸ್ಯರು ಅವರನ್ನು ಬೆಂಬಲಿಸಿದ್ದರು ಎಂದು ಆರೋಪಿಸಲಾಗಿತ್ತು.
ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ನಂತರ ಯುಪಿಯ ಮುಜಾಫರ್ನಗರದಲ್ಲಿರುವ ಬುಧಾನಾ ಪೊಲೀಸ್ ಠಾಣೆಗೆ ಪ್ರಕರಣವನ್ನ ವರ್ಗಾಯಿಸಲಾಗಿತ್ತು.