

‘ಬಿಗ್ ಬಾಸ್ ಸೀಸನ್ 12’ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಸದ್ದು ಮಾಡಿದ್ದ ಸೂರಜ್ ಸಿಂಗ್ ಅವರಿಗೆ ಬಂಪರ್ ಆಫರ್ ಸಿಕ್ಕಿದ್ದು, ನಟನೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಕಾಲಿಟ್ಟಿದ್ದ ಸೂರಜ್ ಸಿಂಗ್..ಎರಡು ವಾರದ ಹಿಂದೆ ಮಿಡ್ ವೀಕ್ ಎಲಿಮಿನೇಶನ್‌ನಲ್ಲಿ ಮನೆಯಿಂದ ಹೊರಬಂದರು. ಇದಕ್ಕೆ ಆಕ್ಷೇಪಗಳು ವ್ಯಕ್ತವಾದ್ದವು.
ಒಳ್ಳೆಯ ಸ್ಪರ್ಧಿಯಾಗಿದ್ದ ಸೂರಜ್, ಮನೆಯೊಳಗೆ ರಾಶಿಕಾ ಸಹವಾಸ ಮಾಡಬಾರದಿತ್ತು ಎಂಬ ಮಾತುಗಳು ಕೇಳಿ ಬಂದಿತ್ತು. ಈ ಎಲ್ಲದರ ನಡುವೆ ಸೂರಜ್ ಸಿಂಗ್ ಅವರಿಗೆ ಕಲರ್ಸ್ ಕನ್ನಡ ವಾಹಿನಿ ಭರ್ಜರಿ ಅವಕಾಶ ಕೊಟ್ಟಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗುತ್ತಿರುವ ಪವಿತ್ರ ಬಂಧನ ಸೀರಿಯಲ್‌ನಲ್ಲಿ ಸೂರಜ್ ಸಿಂಗ್ ನಾಯಕನಾಗಿ ನಟಿಸುತ್ತಿದ್ದು, ಈ ಮೂಲಕ ನಟನೆಯ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇದು ಅಣ್ಣ -ತಮ್ಮನ ಮಧ್ಯೆಯ ಬಾಂಧವ್ಯದ ಕಥೆಯಾಗಿದ್ದು. ನಾಯಕಿಯಾಗಿ ಅಮೂಲ್ಯ ಭಾರದ್ವಾಜ್ ನಟಿಸಿದ್ದಾರೆ. ದೇವದತ್ ದೇಶ್‌ಮುಖ್ ಆಗಿ ಸೂರಜ್ ಸಿಂಗ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ,
ಸೂರಜ್ ಸಿಂಗ್ ಒಬ್ಬ ಬಾಣಸಿಗ. ಕೆಲಸಕ್ಕಾಗಿ ಕೆನಡಾಕ್ಕೂ ಹೋಗಿಬಂದವರು. ತಮ್ಮ ಇನ್‌ಸ್ಟಾಗ್ರಾಂ ವಿಡಿಯೊಗಳ ಮೂಲಕವೇ ಹೆಸರಾಗಿದ್ದರು. ಅವರಿಗೆ ಬಿಗ್‌ಬಾಸ್ ಅವಕಾಶ ಸಿಕ್ಕಿದ್ದೂ ಈ ವಿಡಿಯೊಗಳಿಂದಲೇ. ನೋಡೋಕೆ ಥೇಟ್ ಮಾಡೆಲ್ ಥರ ಕಾಣಿಸುತ್ತಾರೆ. ಆದರೆ ಬಣ್ಣದ ಲೋಕ ಅಂದರೆ ಸೀರಿಯಲ್, ಸಿನಿಮಾಗಳು ಇವರಿಗೆ ಹೊಸದು. ತುಂಬ ಪ್ರಬುದ್ಧತೆ ಇರುವ ಸ್ಪರ್ಧಿ ಸೂರಜ್‌ರನ್ನ ಅನೇಕರು ಇಷ್ಟಪಟ್ಟಿದ್ದರು. ಇದೀಗ ಅವರಿಗೆ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿರುವುದಕ್ಕೆ ವೀಕ್ಷಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
Advertisement