

ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರ ಪ್ರತಿದಿನ ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಿದೆ. ಈ ಚಿತ್ರವು ಇದೀಗ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ₹800 ಕೋಟಿ ಗಳಿಕೆ ಮಾಡಿದ ಮೊದಲ ಹಿಂದಿ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಜಿಯೋ ಸ್ಟುಡಿಯೋಸ್, 'ಧುರಂಧರ್ ದಿನಚರಿ: ಎದ್ದೇಳಿ. ದಾಖಲೆಗಳನ್ನು ಬರೆಯಿರಿ. ಪುನರಾವರ್ತಿಸಿ' ಎಂದು ಬರೆದಿದೆ. ಭಾರತದಲ್ಲಿ ₹806.80 ಕೋಟಿ ಗಳಿಸುವ ಮೂಲಕ ಈ ಚಿತ್ರವು ಹಿಂದಿ ಸಿನಿಮಾ ರಂಗದಲ್ಲಿ ಹೊಸ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ ಎಂದು ನಿರ್ಮಾಣ ಸಂಸ್ಥೆ ಭಾನುವಾರ ಘೋಷಿಸಿದೆ.
ಚಿತ್ರವು 1ನೇ ವಾರದಲ್ಲಿ ₹218 ಕೋಟಿ ಗಳಿಸಿತು. ನಂತರ 2ನೇ ವಾರದಲ್ಲಿ ₹261.5 ಕೋಟಿ ರೂ., 3ನೇ ವಾರದಲ್ಲಿ ₹189.3 ಕೋಟಿ ಮತ್ತು 4ನೇ ವಾರದಲ್ಲಿ ₹115.70 ಕೋಟಿ ಗಳಿಸಿತು. 29ನೇ ದಿನ, ಚಿತ್ರವು ₹9.70 ಕೋಟಿ ಗಳಿಸಿದರೆ, 30ನೇ ದಿನ ಇನ್ನೂ ₹12.60 ಕೋಟಿ ಗಳಿಸಿದೆ.
ಆದಾಗ್ಯೂ, ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಈ ಚಿತ್ರದ ದೇಶೀಯ ಕಲೆಕ್ಷನ್ ಇನ್ನೂ ₹759 ಕೋಟಿ ಆಗಿದೆ.
ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹ 1240 ಕೋಟಿ ಗಳಿಸಿದೆ. ಭಾರತದಲ್ಲಿ ₹968 ಕೋಟಿ ಗಳಿಸಿದೆ ಎಂದು ನಿರ್ಮಾಣ ಸಂಸ್ಥೆ ಇಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದೆ. ಧುರಂಧರ್ ಈಗಾಗಲೇ ಶಾರುಖ್ ಖಾನ್ ಅವರ ಜವಾನ್ (₹1,163.62 ಕೋಟಿ), ಪಠಾಣ್ (₹1,069.85 ಕೋಟಿ) ಮತ್ತು ಯಶ್ ನಟನೆಯ ಕೆಜಿಎಫ್: ಅಧ್ಯಾಯ 2 (₹1,215 ಕೋಟಿ) ಚಿತ್ರಗಳನ್ನು ಹಿಂದಿಕ್ಕಿದ್ದು, ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಐದನೇ ಚಿತ್ರವಾಗಿದೆ.
ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ನಟನೆಯ ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ, ಹಾಲಿವುಡ್ ಚಿತ್ರ ಅವತಾರ್: ಫೈರ್ ಅಂಡ್ ಆಶ್ ಮತ್ತು ಅಗಸ್ತ್ಯ ನಂದ ಅವರ ಇಕ್ಕಿಸ್ ನಂತಹ ಹೊಸ ಚಿತ್ರಗಳ ಬಿಡುಗಡೆ ಹೊರತಾಗಿಯೂ ಗಲ್ಲಾಪೆಟ್ಟಿಗೆಯಲ್ಲಿ ಧುರಂಧರ್ ಓಟ ಇನ್ನೂ ಮುಂದುವರೆದಿದೆ. ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ ಬಿಡುಗಡೆಯಾದ 10 ದಿನಗಳಲ್ಲಿ ₹40 ಕೋಟಿ ಗಳಿಸಿದರೆ, ಜನವರಿ 1 ರಂದು ಬಿಡುಗಡೆಯಾದ ಇಕ್ಕಿಸ್ ಮೂರು ದಿನಗಳಲ್ಲಿ ₹13 ಕೋಟಿ ಗಳಿಸಿದೆ. ಅವತಾರ್: ಆಶ್ ಅಂಡ್ ಫೈರ್ ಬಿಡುಗಡೆಯಾದ 16 ದಿನಗಳಲ್ಲಿ ₹165.9 ಕೋಟಿ ಗಳಿಸಿದೆ.
ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್ ಮತ್ತು ಸಾರಾ ಅರ್ಜುನ್ ನಟಿಸಿದ್ದಾರೆ.
Advertisement