ಮುಸ್ಲಿಂ ಯುವ ರಾಜಕಾರಣಿಯೊಂದಿಗೆ ಕಾಂಟ್ರವರ್ಸಿ ನಟಿ ಸ್ವರಾ ಭಾಸ್ಕರ್ ಮದುವೆ!
ಮುಂಬೈ: ವಿವಾದಾತ್ಮಕ ಹೇಳಿಕೆಯಿಂದ ಆಗಾಗ್ಗೆ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತನ್ನ ಪತಿಯ ಹೆಸರನ್ನು ಗುರುವಾರ ಬಹಿರಂಗಪಡಿಸಿದ್ದಾರೆ. ಪತಿ ಹೆಸರು ಮಾತ್ರವಲ್ಲದೇ, ಈಗಾಗಲೇ ಮದುವೆಯಾಗಿರುವುದನ್ನು ತಿಳಿಸಿದ್ದಾರೆ.
ಆಕೆ ಮಹಾರಾಷ್ಟ್ರ ಎಸ್ಪಿ ಯುವ ಘಟಕದ ಅಧ್ಯಕ್ಷ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರುವ ವಿಚಾರವನ್ನು ದೃಢಪಡಿಸಿದ್ದಾರೆ. ವಿಶೇಷ ವಿವಾಹ ಕಾಯ್ದೆಯಡಿ ಜನವರಿ 2 ರಂದು ಕೋರ್ಟ್ ನಲ್ಲಿ ಈ ದಂಪತಿ ರಿಜಿಸ್ಟ್ರರ್ ಮದುವೆಯಾಗಿದ್ದಾರೆ.ಈ ಕುರಿತ ವಿಡಿಯೋವೊಂದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವರಾ ಭಾಸ್ಕರ್ ಇಂದು ಹಂಚಿಕೊಂಡಿದ್ದಾರೆ.
"ಕೆಲವೊಮ್ಮೆ ನಿಮ್ಮ ಪಕ್ಕದಲ್ಲೇ ಇರುವ ಯಾವುದನ್ನಾದರೂ ನೀವು ಹೆಚ್ಚಾಗಿ ಹುಡುಕುತ್ತೀರಿ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು, ಆದರೆ ನಾವು ಮೊದಲು ಸ್ನೇಹ ಕಂಡುಕೊಂಡಿದ್ದೇವು, ನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡೆವು ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋವನ್ನು ರೀಟ್ವಿಟ್ ಮಾಡಿರುವ ಅಹಮದ್, ತನ್ನನ್ನು ಕೈ ಹಿಡಿದಿದ್ದಕ್ಕೆ ಧನ್ಯವಾದಗಳು ಅಂದು ಸ್ವರಾ ಭಾಸ್ಕರ್ ಅವರಿಗೆ ಹೇಳಿದ್ದಾರೆ. ಸ್ವರಾ ಭಾಸ್ಕರ್ ಕೊನೆಯ ಬಾರಿಗೆ ಕಳೆದ ವರ್ಷ ಬಿಡುಗಡೆಯಾದ 'ಜಹಾನ್ ಚಾರ್ ಯಾರ್" ಹಾಸ್ಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ