'ದಿ ವ್ಯಾಕ್ಸಿನ್ ವಾರ್' ಶೂಟಿಂಗ್ ವೇಳೆ ಅವಘಡ: 'ದಿ ಕಾಶ್ಮೀರ್ ಫೈಲ್ಸ್‌' ಖ್ಯಾತಿಯ ನಟಿ ಪಲ್ಲವಿ ಜೋಶಿಗೆ ಗಾಯ

ಬಾಲಿವುಡ್‌ನ ಖ್ಯಾತ ನಟಿ ಕಮ್ ನಿರ್ಮಾಪಕಿ ಪಲ್ಲವಿ ಜೋಶಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಅವರ ಮುಂದಿನ ಸಿನಿಮಾ 'ದಿ ವ್ಯಾಕ್ಸಿನ್ ವಾರ್‌'ನ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿ ಅವಘಡ ಸಂಭವಿಸಿದೆ.
ಪಲ್ಲವಿ ಜೋಶಿ
ಪಲ್ಲವಿ ಜೋಶಿ

ಬಾಲಿವುಡ್‌ನ ಖ್ಯಾತ ನಟಿ ಕಮ್ ನಿರ್ಮಾಪಕಿ ಪಲ್ಲವಿ ಜೋಶಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಅವರ ಮುಂದಿನ ಸಿನಿಮಾ 'ದಿ ವ್ಯಾಕ್ಸಿನ್ ವಾರ್‌'ನ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿ ಅವಘಡ ಸಂಭವಿಸಿದೆ. ಗಾಯಗೊಂಡಿರುವ ಪಲ್ಲವಿ ಜೋಶಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ವಿವೇಕ್ ಅಗ್ನಿಹೋತ್ರಿ ನಟನೆಯ ಬಹು ನಿರೀಕ್ಷಿತ ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಪಲ್ಲವಿ ಜೋಶಿ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಸೆಟ್‌ಗೆ ತೆರಳಿದ್ದರು. ಆಗ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗಿದೆ. ಈ ವೇಳೆ ಅವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಸದ್ಯ ಪಲ್ಲವಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ‘ದಿ ವ್ಯಾಕ್ಸಿನ್ ವಾರ್’ಚಿತ್ರವು ಕೋವಿಡ್ ಲಸಿಕೆ ಕಂಡುಹಿಡಿಯಲು ಎರಡು ವರ್ಷಗಳ ಕಾಲ ಹಗಲು ರಾತ್ರಿ ದುಡಿದ ಭಾರತೀಯ ವಿಜ್ಞಾನಿಗಳು ಮತ್ತು ಸಿಬ್ಬಂದಿಯ ಕಥಾಹಂದರವನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com