ಶಾರುಖ್ ಖಾನ್-ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ
ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾ 50 ದಿನಗಳ ಕಾಲ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆದ ನಂತರ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.
Published: 21st March 2023 11:26 AM | Last Updated: 04th April 2023 11:28 AM | A+A A-

ಪಠಾಣ್ ಚಿತ್ರದ ಫೋಸ್ಟರ್
ಮುಂಬೈ: ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾ 50 ದಿನಗಳ ಕಾಲ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆದ ನಂತರ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.
ಈ ಕುರಿತು ಪ್ರೈಮ್ ವಿಡಿಯೋ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದು, 'ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಕಾಲ ಪ್ರಮುಖ ಪಾತ್ರಗಳಿಂದ ದೂರವಿದ್ದ ಶಾರುಖ್‌ಗೆ ಭರ್ಜರಿ ಕಮ್‌ಬ್ಯಾಕ್ ನೀಡಿದ ಜಾಗತಿಕವಾಗಿ ಭರ್ಜರಿ ಯಶಸ್ಸು ಕಂಡ ಸ್ಪೈ ಥ್ರಿಲ್ಲರ್ ಪಠಾಣ್ ಸಿನಿಮಾ ಬುಧವಾರದಿಂದ ತನ್ನ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ' ಎಂದಿದೆ.
'ಹವಾಮಾನದಲ್ಲಿ ಪ್ರಕ್ಷುಬ್ಧತೆಯನ್ನು ನಾವು ಕಾಣುತ್ತಿದ್ದೇವೆ. ಇದೆಲ್ಲದರ ನಂತರ 'ಪಠಾಣ್' ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾರ್ಚ್ 22 ರಂದು ಬಿಡುಗಡೆಯಾಗಲಿದೆ' ಎಂದು ಪ್ರೈಮ್ ವಿಡಿಯೋ ಟ್ವೀಟ್ ಮಾಡಿದೆ.
we sense a turbulence in the weather, after all Pathaan is coming!#PathaanOnPrime, Mar 22 in Hindi, Tamil and Telugu @iamsrk @deepikapadukone @TheJohnAbraham #SiddharthAnand @yrf pic.twitter.com/MnytnUqZEj
— prime video IN (@PrimeVideoIN) March 20, 2023
ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ 1,000 ಕೋಟಿ ರೂ. ಗಳಿಸಿ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿತು.
ಇದನ್ನೂ ಓದಿ: ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ 50 ದಿನ ಪೂರೈಸಿದ 'ಪಠಾಣ್'; 1 ಸಾವಿರ ಕೋಟಿ ರೂ. ಕಲೆಕ್ಷನ್
ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ನಿರ್ಮಾಣದ 'ಪಠಾನ್' ಸಿನಿಮಾದಲ್ಲಿ ಶಾರುಖ್ ಅವರೊಂದಿಗೆ ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಸಹ ನಟಿಸಿದ್ದಾರೆ.
ಈ ಚಿತ್ರ ಸಲ್ಮಾನ್ ಖಾನ್ ಅವರ 'ಏಕ್ ಥಾ ಟೈಗರ್' ಮತ್ತು 'ಟೈಗರ್ ಜಿಂದಾ ಹೈ' , ಮತ್ತು ಹೃತಿಕ್ ರೋಷನ್ ಅವರ 'ವಾರ್' ನಂತರ ನಿರ್ಮಾಪಕ ಆದಿತ್ಯ ಚೋಪ್ರಾ ಅವರ ನಾಲ್ಕನೇ ಸ್ಪೈ ಚಿತ್ರವಾಗಿದೆ.