
ನಟಿ ಆಕಾಂಕ್ಷಾ ದುಬೆ ಸಾವು
ವಾರಣಾಸಿ: ಖ್ಯಾತ ಭೋಜ್ ಪುರಿ ನಟಿ ಆಕಾಂಕ್ಷಾ ದುಬೆ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ವಾರಣಾಸಿ ಹೊಟೆಲ್ ನಲ್ಲಿ ಅವರ ಶವ ಪತ್ತೆಯಾಗಿದೆ.
ಭೋಜಪುರಿ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಡ್ಯಾನ್ಸರ್ ಆಕಾಂಕ್ಷಾ ದುಬೆ ಅವರು ವಾರಾಣಸಿಯ ಹೋಟೆಲ್ ಒಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ವರದಿಯಾಗಿದೆ. ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಆಕಾಂಕ್ಷಾ ಅವರ ಪತ್ತೆಯಾಗಿದ್ದು, ಪ್ರಾಥಮಿಕವಾಗಿ ಇದೊಂದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ತಮ್ಮ ಬಟ್ಟೆ ಬ್ರಾಂಡ್‌ನಿಂದ ಜೂನಿಯರ್ ಎನ್‌ಟಿಆರ್ ಮಕ್ಕಳಿಗೆ ಉಡುಗೊರೆಗಳನ್ನು ಕಳುಹಿಸಿದ ಆಲಿಯಾ ಭಟ್!
25 ವರ್ಷದ ನಟಿ ಆಕಾಂಕ್ಷಾ ತಮ್ಮ ಮುಂದಿನ ಚಿತ್ರಕ್ಕಾಗಿ ವಾರಣಾಸಿಯಲ್ಲಿ ಶೂಟಿಂಗ್‌ಗೆ ತೆರಳಿದ್ದರು. ತಮ್ಮ ಪಾಲಿನ ಶೂಟಿಂಗ್ ಮುಗಿಸಿ ವಾರಾಣಸಿಯ ಸಾರಾನಾಥ್ ಹೋಟೆಲ್‌ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಹೋಟೆಲ್ ಸಿಬ್ಬಂದಿ ರೂಮಿಗೆ ತೆರಳಿದಾಗ ನಟಿಯ ಶವ ಪತ್ತೆಯಾಗಿದೆ. ಕೂಡಲೇ ಹೊಟೆಲ್ ಅಧಿಕಾರಿಗಳಿಂದ ಪೊಲೀಸರಿಗೆ ಮಾಹಿತಿ ತಿಳಿದಿದ್ದು, ಸ್ಥಳಕ್ಕೆ ದೌಡಾಯಿಸಿದ ವಾರಣಾಸಿ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಂತೆಯೇ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Bhojpuri actress Akanksha Dubey dies allegedly by suicide at a hotel in Varanasi, Uttar Pradesh. Details awaited.
— ANI (@ANI) March 26, 2023
(Pic: Akanksha Dubey's Instagram account) pic.twitter.com/Abw2oGkG7H
ಆಕಾಂಕ್ಷಾ ಸಾವಿನ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಾರಾಣಸಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಯಕ ಸೋನು ನಿಗಮ್ ತಂದೆಯ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ!
ಯಾರು ಈ ಆಕಾಂಕ್ಷಾ ದುಬೆ?
ಭೋಜಪುರಿ ಚಿತ್ರರಂಗದ ಕನಸಿನ ರಾಣಿಯಂದು ಗುರುತಿಸಿಕೊಂಡಿದ್ದ ಮಿರ್ಜಾಪುರ್ ಮೂಲದ ಆಕಾಂಕ್ಷಾ ಅವರು ಐಎಎಸ್ ಅಧಿಕಾರಿ ಆಗಬೇಕೆಂದುಕೊಂಡು ಮುಂಬೈ ಸೇರಿದ್ದರು. ಆದರೆ, ಅಲ್ಲಿಂದ ಭೋಜಪುರಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹೆಸರು ಮಾಡಿದ್ದರು. ನಿನ್ನೆಯಷ್ಟೇ ಅವರು ಬೆಲ್ಲಿ ಡ್ಯಾನ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಭೋಜಪುರಿಯ ಮೇರಿ ಜಂಗ್, ಮೇರಿ ಪೈಸಲಾ, ಮುಜ್ಸೆ ಶಾದಿ ಕರೋಗೆ (ಭೋಜಪುರಿ), ವೀರೋನ್ ಕಿ ವೀರ, ಕಸಮ್ ಪೈದಾ ಕರನೇ ಕಿ 2 ಸಿನಿಮಾಗಳಲ್ಲಿ ಮಿಂಚಿದ್ದಲ್ಲದೇ ಆಕಾಂಕ್ಷಾ ಹಲವು ಭೋಜಪುರಿ ಮ್ಯುಸಿಕ್ ಅಲ್ಬಂಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಆಕಾಂಕ್ಷಾ ಅವರು ಇತ್ತೀಚೆಗೆ ಸಮರ್ ಸಿಂಗ್ ಎನ್ನುವ ನಟರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.