ವಿಶ್ವ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂ. ದಾಟಿದ 'ತೂ ಝೂಟಿ ಮೈನ್ ಮಕ್ಕರ್'
ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ 'ತು ಝೂಟಿ ಮೈನ್ ಮಕ್ಕರ್' ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 200 ಕೋಟಿ ರೂ. ದಾಟಿದೆ ಎಂದು ನಿರ್ಮಾಪಕರು ಶುಕ್ರವಾರ ತಿಳಿಸಿದ್ದಾರೆ.
Published: 29th March 2023 07:31 PM | Last Updated: 29th March 2023 08:27 PM | A+A A-

ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್
ಮುಂಬೈ: ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ 'ತು ಝೂಟಿ ಮೈನ್ ಮಕ್ಕರ್' ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 200 ಕೋಟಿ ರೂ. ದಾಟಿದೆ ಎಂದು ನಿರ್ಮಾಪಕರು ಶುಕ್ರವಾರ ತಿಳಿಸಿದ್ದಾರೆ.
ಈ ಕುರಿತು ಲವ್ ರಂಜನ್ ನಿರ್ದೇಶನದ ಚಿತ್ರ ಮಾರ್ಚ್ 8 ರಂದು ಬಿಡುಗಡೆಯಾದಾಗಿನಿಂದ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ರೂ. 201 ಕೋಟಿ ಸಂಗ್ರಹಿಸಿದೆ ಎಂದು ಎಂದು ಲವ್ ಫಿಲಂಸ್ ಟ್ವೀಟ್ ಮಾಡಿದೆ. 'ತು ಝೂಟಿ ಮೈನ್ ಮಕ್ಕರ್' 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ನಿಮ್ಮ ಅಪಾರ ಬೆಂಬಲಕ್ಕೆ ಧನ್ಯವಾದಗಳು ಎಂದು ಸ್ಟುಡಿಯೋ ಟ್ವೀಟ್ ಮಾಡಿದೆ. ರಾಷ್ಟ್ರದಲ್ಲಿ ಚಿತ್ರ 161 ಕೋಟಿ ರೂ. ಗಳಿಸಿದೆ ಎಂದು ಹೇಳಿಕೆಯಲ್ಲಿ ಚಿತ್ರ ತಯಾರಕರು ಮಾಹಿತಿ ನೀಡಿದ್ದಾರೆ.
#TuJhoothiMainMakkaar crosses a love worth more than 200 Crore
Thankyou for your immense support.#RanbirKapoor @ShraddhaKapoor @luv_ranjan #AnshulSharma @modyrahulmody @gargankur #BhushanKumar @LuvFilms @TSeries @ipritamofficial @OfficialAMITABH @BoneyKapoor pic.twitter.com/i7nKDKWbGu— Luv Films (@LuvFilms) March 29, 2023
ತು ಝೂಟಿ ಮೈನ್ ಮಕ್ಕರ್ ಚಿತ್ರವನ್ನು ಲವ್ ಫಿಲ್ಮ್ಸ್ ಮತ್ತು ಅಂಕುರ್ ಗರ್ಗ್ ನಿರ್ಮಿಸಿದ್ದಾರೆ ಮತ್ತು ಟಿ-ಸೀರೀಸ್‌ನ ಗುಲ್ಶನ್ ಕುಮಾರ್ ಮತ್ತು ಭೂಷಣ್ ಕುಮಾರ್ ಪ್ರಸ್ತುತಪಡಿಸಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕಪಾಡಿಯಾ, ಬೋನಿ ಕಪೂರ್ ಮತ್ತು ಸ್ಟ್ಯಾಂಡ್-ಅಪ್ ಕಲಾವಿದ ಅನುಭವ್ ಸಿಂಗ್ ಬಸ್ಸಿ ಕೂಡ ಇದ್ದಾರೆ.