1971ರ ನಂತರ ಬಾಂಗ್ಲಾದೇಶದಲ್ಲಿ ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾ ಬಿಡುಗಡೆ; ಮೇ 12 ರಂದು 'ಪಠಾಣ್' ತೆರೆಗೆ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಬ್ಲಾಕ್‌ಬಸ್ಟರ್ 'ಪಠಾನ್' ಈಗ 1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಇದು ಬಾಂಗ್ಲಾದೇಶದಲ್ಲಿ ಮೇ 12 ರಂದು ಬಿಡುಗಡೆಯಾಗಲಿದೆ.
ಪಠಾಣ್ ಚಿತ್ರದ ಫೋಸ್ಟರ್
ಪಠಾಣ್ ಚಿತ್ರದ ಫೋಸ್ಟರ್

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಬ್ಲಾಕ್‌ಬಸ್ಟರ್ 'ಪಠಾನ್' ಈಗ 1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಇದು ಬಾಂಗ್ಲಾದೇಶದಲ್ಲಿ ಮೇ 12 ರಂದು ಬಿಡುಗಡೆಯಾಗಲಿದೆ.

ಅಂತರರಾಷ್ಟ್ರೀಯ ವಿತರಣಾ ವಿಭಾಗದ ಉಪಾಧ್ಯಕ್ಷ ನೆಲ್ಸನ್ ಡಿಸೋಜಾ ಮಾತನಾಡಿ, ‘ಸಿನಿಮಾವು ಯಾವತ್ತೂ ರಾಷ್ಟ್ರ, ಜನಾಂಗ, ಸಂಸ್ಕೃತಿಗಳ ನಡುವೆ ಒಗ್ಗೂಡಿಸುವ ಶಕ್ತಿಯಾಗಿದ್ದು, ಎಲ್ಲಾ ಗಡಿಗಳನ್ನು ಮೀರಿ ಜನರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದಿದ್ದಾರೆ.

'ವಿಶ್ವದಾದ್ಯಂತ ಐತಿಹಾಸಿಕ ಕಲೆಕ್ಷನ್ ಮಾಡಿರುವ 'ಪಠಾಣ್' ಈಗ ಬಾಂಗ್ಲಾದೇಶದಲ್ಲಿ ಪ್ರೇಕ್ಷಕರನ್ನು ರಂಜಿಸಲು ಅವಕಾಶವನ್ನು ಪಡೆಯುತ್ತಿದೆ. ಇದನ್ನು ನಂಬಲಾಗದಷ್ಟು ನಾವು ಥ್ರಿಲ್ ಆಗಿದ್ದೇವೆ!' ಎಂದಿದ್ದಾರೆ.

'1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಲಿರುವ ಮೊದಲ ಹಿಂದಿ ಚಲನಚಿತ್ರ ಪಠಾಣ್ ಆಗಿದ್ದು, ಅವರ ನಿರ್ಧಾರಕ್ಕಾಗಿ ನಾವು ಅಧಿಕಾರಿಗಳಿಗೆ ಕೃತಜ್ಞರಾಗಿರುತ್ತೇವೆ. ಶಾರುಖ್ ಖಾನ್ ಬಾಂಗ್ಲಾದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಮ್ಮ ಇತ್ತೀಚಿನ ಪಠಾನ್ ಚಿತ್ರವನ್ನು ವೈಆರ್‌ಎಫ್‌ ಸ್ಪೈ ಯೂನಿವರ್ಸ್‌ನಿಂದ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದು ನಾವು ಭಾವಿಸುತ್ತೇವೆ. ಎಸ್‌ಆರ್‌ಕೆ ಮತ್ತು ಹಿಂದಿ ಚಿತ್ರರಂಗದ ಪರಿಪೂರ್ಣ ಚಲನಚಿತ್ರ ಪಠಾಣ್, ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಲಿದೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ಸಿನಿಮಾವನ್ನು ಪೂರ್ಣ ವೈಭವದಲ್ಲಿ ಪ್ರತಿನಿಧಿಸುತ್ತದೆ' ಎಂದಿದ್ದಾರೆ.

ವೈಆರ್‌ಎಫ್‌ನ ಸ್ಪೈ ಯೂನಿವರ್ಸ್‌ನ ಅತಿ ಹೆಚ್ಚು ಗಳಿಕೆಯ ಚಲನಚಿತ್ರ ಪಠಾಣ್ ಆಗಿದೆ. ಇದು 'ಏಕ್ ಥಾ ಟೈಗರ್', 'ಟೈಗರ್ ಜಿಂದಾ ಹೈ' ಮತ್ತು 'ವಾರ್' ನಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com