
ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಹಾರರ್ ಕಾಮಿಡಿ 'Stree 2' ದೇಶದ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಒಟ್ಟು 172 ಕೋಟಿ ರೂ. ಗಳಿಸಿದೆ ಎಂದು ಚಿತ್ರ ತಯಾರಕರು ಭಾನುವಾರ ತಿಳಿಸಿದ್ದಾರೆ. ಇದು ಅಮರ್ ಕೌಶಿಕ್ ನಿರ್ದೇಶಿಸಿದ 2018ರ ಹಿಟ್ Stree ಸಿನಿಮಾದ ಸ್ವಿಕ್ವೆಲ್ ಆಗಿದೆ.
ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ಮತ್ತು ಅಪರಶಕ್ತಿ ಖುರಾನಾ ನಟಿಸಿರುವ 'Stree 2' ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪ್ರೊಡಕ್ಷನ್ ಹೌಸ್ ಪ್ರಕಾರ, ದೇಶಾದ್ಯಂತ ಚಿತ್ರದ ಒಟ್ಟು ಕಲೆಕ್ಷನ್ 172 ಕೋಟಿ ರೂ. ಆಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಪಡೆ ಮುನ್ನುಗ್ಗುತ್ತಿರುವುದಕ್ಕೆ ಪ್ರೇಕ್ಷಕರಿಗೆ ಧನ್ಯವಾದ ಹೇಳಿದೆ.
Advertisement