ಸುಕೇಶ್ ಚಂದ್ರಶೇಖರ್ ಪ್ರಕರಣ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೊತ್ತಿದ್ದೂ ಭಾಗಿಯಾಗಿದ್ದಾರೆ; ಕೋರ್ಟ್ ಗೆ ಇಡಿ ಹೇಳಿಕೆ

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ವಂಚಕ ಸುಕೇಶ್ ಚಂದ್ರಶೇಖರ್ ಅವರ ಅಪರಾಧದ ಆದಾಯವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಮತ್ತು ಬಳಸಿಕೊಳ್ಳುವಲ್ಲಿ ಉದ್ದೇಶಪೂರ್ವಕವಾಗಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಹೈಕೋರ್ಟ್‌ ಗೆ ಹೇಳಿಕೆ ನೀಡಿದೆ.
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಖೇಶ್ ಚಂದ್ರಶೇಖರ್
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಖೇಶ್ ಚಂದ್ರಶೇಖರ್

ನವದೆಹಲಿ: 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ವಂಚಕ ಸುಕೇಶ್ ಚಂದ್ರಶೇಖರ್ ಅವರ ಅಪರಾಧದ ಆದಾಯವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಮತ್ತು ಬಳಸಿಕೊಳ್ಳುವಲ್ಲಿ ಉದ್ದೇಶಪೂರ್ವಕವಾಗಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಹೈಕೋರ್ಟ್‌ ಗೆ ಹೇಳಿಕೆ ನೀಡಿದೆ.

ಸುಖೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇಡಿ ತನ್ನ ವಾದವನ್ನು ಮಂಡಿಸಿದೆ. ಈ ಪ್ರಕರಣವನ್ನು ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರ ಮುಂದೆ ಇಡಿ ಅಧಿಕಾರಿಗಳು ತಮ್ಮ ಹೇಳಿಕೆ ಪಟ್ಟಿ ಮಾಡಿದ್ದು, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪರ ವಕೀಲರು ತಮ್ಮ ವಾದ ಮಂಡನೆಗೆ ಸಮಯ ಕೋರಿದರು. ಅದರಂತೆ ಜಾರಿ ನಿರ್ದೇಶನಾಲಯ ಅಫಿಡವಿಟ್‌ಗೆ ಮರುಜೋಡಣೆ ಸಲ್ಲಿಸಲು ಹೈಕೋರ್ಟ್ ಈ ವಿಷಯವನ್ನು ಏಪ್ರಿಲ್ 15 ಕ್ಕೆ ಪಟ್ಟಿ ಮಾಡಿ ವಿಚಾರಣೆ ಮುಂದೂಡಿದೆ.

ಇಂದಿನ ವಿಚಾರಣೆಯಲ್ಲಿ ED ಕೋರ್ಟ್ ಗೆ ಸಲ್ಲಿಸಿರುವ ತನ್ನ ಉತ್ತರದಲ್ಲಿ, ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಚಂದ್ರಶೇಖರ್ ಜೊತೆಗಿನ ಹಣಕಾಸಿನ ವಹಿವಾಟಿನ ಬಗ್ಗೆ ಸತ್ಯವನ್ನು ಬಹಿರಂಗಪಡಿಸಿಲ್ಲ ಮತ್ತು ಸಾಕ್ಷ್ಯಗಳು ಸಿಗುವವರೆಗೂ ಯಾವಾಗಲೂ ಸತ್ಯವನ್ನು ಮರೆಮಾಚಿದ್ದಾರೆ. ಅವರು ಇಂದಿನವರೆಗೂ ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಸುಖೇಶ್ ಚಂದ್ರಶೇಖರ್ ಬಂಧನದ ನಂತರ ನಟಿ ಜಾಕ್ವೆಲಿನ್ ತಮ್ಮ ಮೊಬೈಲ್ ಫೋನ್‌ನಿಂದ ಎಲ್ಲಾ ಡೇಟಾವನ್ನು ಡಿಲೀಟ್ ಮಾಡಿದ್ದು, ಆ ಮೂಲಕ ಸಾಕ್ಷ್ಯವನ್ನು ನಾಶಪಡಿಸಿದ್ದಾರೆ ಎಂಬುದಂತೂ ನಿಜ. ಸಾಕ್ಷಿ ನಾಶಪಡಿಸುವಂತೆ ತನ್ನ ಸಹಚರರ ಸುಖೇಶ್ ನನ್ನೂ ಕೇಳಿದ್ದಾರೆ. ಅಪರಾಧದ ಆದಾಯವನ್ನು ಅವರು ಅನುಭವಿಸಿದ್ದಾರೆ. ಈಗಲೂ ಬಳಸುತ್ತಿದ್ದಾರೆ. ಆರೋಪಿ ಚಂದ್ರಶೇಖರ್‌ನ ಅಪರಾಧದ ಆದಾಯವನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಬಳಸಿಕೊಳ್ಳಲು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಉದ್ದೇಶಪೂರ್ವಕವಾಗಿ ತೊಡಗಿಸಿಕೊಂಡಿದ್ದರು ಎಂಬುದು ಸಾಬೀತಾಗಿದೆ ಎಂದು ಹೇಳಿದೆ.

ಆರಂಭದಲ್ಲಿ ತನ್ನ ಹೇಳಿಕೆಗಳಲ್ಲಿ, ನಟಿ ಚಂದ್ರಶೇಖರನ ಬಲಿಪಶು ಎಂದು ಹೇಳುವ ಮೂಲಕ ಪ್ರಕರಣದಲ್ಲಿ ತನ್ನ ಪಾತ್ರವನ್ನು ಮರೆಮಾಚಲು ಪ್ರಯತ್ನಿಸಿದ್ದರು. ಆದಾಗ್ಯೂ, ತನಿಖೆಯ ಸಮಯದಲ್ಲಿ, ಆಕೆ ಚಂದ್ರಶೇಖರನ ಅಪರಾಧ ಹಿನ್ನೆಲೆಯ ಬಗ್ಗೆ ತಿಳಿದಿದ್ದರೂ, ಆಕೆ ತನಗಾಗಿ ಮತ್ತು ತನ್ನ ಕುಟುಂಬ ಸದಸ್ಯರಿಗಾಗಿ ಆತನಿಂದ ಸ್ವೀಕರಿಸುವುದನ್ನು ಮುಂದುವರೆಸಿದ್ದರು ಎಂದು ಇಡಿ ಆರೋಪಿಸಿದೆ.

ಅಲ್ಲದೆ ಚಂದ್ರಶೇಖರ್ ಮತ್ತು ಲೀನಾ ಮರಿಯಾ ಪಾಲ್ ದಂಪತಿಗಳು ಅಂಶದ ಬಗ್ಗೆ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಚೆನ್ನಾಗಿ ತಿಳಿದಿತ್ತು. ಇದರ ಹೊರತಾಗಿಯೂ, ಜಾಕ್ವೆಲಿನ್ ಸುಖೇಶ್ ನೊಂದಿಗೆ ಸಂಬಂಧವನ್ನು ಮುಂದುವರೆಸಿದ್ದರು ಮತ್ತು ಅವನಿಂದ ಆರ್ಥಿಕ ಲಾಭವನ್ನು ಪಡೆದಿದ್ದರು ಎಂದು ಇಡಿ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com